ನಮ್ಮ ಯೋಜನೆಗಳು

ಶಿಕ್ಷಣ

22 Feb 2023

  • ಶಿಕ್ಷಣ

ಸುಧೀರ್ ಅವರು ಉಡುಪಿಯ ನಂದಿಕೂರಿನಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ವಿನಂತಿ ಪತ್ರವನ್ನು ಸ್ವೀಕರಿಸಿದ ಸಮಯವು ಒಂದು ನೀರಸವಾದ ಮಧ್ಯಾಹ್ನದ ಸಮಯವಾಗಿತ್ತು. 169 ಮಕ್ಕಳನ್ನು ಹೊಂದಿರುವ ಈ ಶಾಲೆಯಲ್ಲಿ, ಮಧ್ಯಾಹ್ನದ ಉಚಿತ ಊಟವನ್ನು ಆರಂಭಿಸಲು, ಶಾಲೆಯಲ್ಲಿ ಅಡುಗೆಯನ್ನು ತಯಾರಿಸುವುದಕ್ಕಾಗಿ ಅಗತ್ಯವಿರುವ ಆಡುಗೆ ಪಾತ್ರೆಗಳು, ಮಿಕ್ಸರ್ ಗ್ರೈಂಡರ್, ವಾಟರ್ ಪ್ಯೂರಿಫೈಯರ್ (ನೀರು ಶುದ್ಧೀಕರಣ ಯಂತ್ರ) ಮತ್ತು ಕೆಲವು ಸ್ಟೀಲ್ ಬಕೆಟ್‌ಗಳ ಅವಶ್ಯಕತೆಯಿದೆ ಎಂದು ಆ ಪತ್ರದಲ್ಲಿ ತಿಳಿಸಲಾಗಿತ್ತು. ಇದೊಂದು ಕೂಡಲೇ ಗಮನವಹಿಸುವ ಅತ್ಯಗತ್ಯವಾದ ತುರ್ತು ಅವಶ್ಯಕತೆಯಾಗಿತ್ತು.


16 Feb 2023

  • ಶಿಕ್ಷಣ

ವೆಂಟನಾ ಫೌಂಡೇಶನ್, ಶಿಕ್ಷಣದ ಮೂಲಕ ಸಮುದಾಯಗಳನ್ನು ಸಬಲೀಕರಣಗೊಳಿಸುವ ಧ್ಯೇಯೋದ್ದೇಶದ ಕಡೆಗೆ ಕೆಲಸ ಮಾಡುವುದನ್ನು ಮುಂದುವರೆಸುತ್ತಿರುವುದರಿಂದ, ಇದು ಇತ್ತೀಚೆಗೆ ಕೋಟೇಶ್ವರದ ಗುರುಕುಲ ಶಾಲೆಯನ್ನು ಬೆಂಬಲಿಸುವ ಅವಕಾಶವನ್ನು ಪಡೆದುಕೊಂಡಿದೆ. ಎರಡು ದಶಕಗಳಿಂದ ಪೂರ್ವ ಗುರುಕುಲ ಎಂಬ ಹೆಸರಿನ ಶಾಲೆಯು ಈ ಪ್ರದೇಶದ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ. ಆದಾಗ್ಯೂ, ಹಿರಿಯ ವಿದ್ಯಾರ್ಥಿಗಳು ಒಮ್ಮೆ ಉನ್ನತ ಅಧ್ಯಯನವನ್ನು ಪಡೆಯಲು ಹೋದ ನಂತರ ಅವರಲ್ಲಿ ಉತ್ತಮ ಪರಿವರ್ತನೆಗೆ ಸಹಾಯ ಮಾಡಲು ಕಾರಣವಾಗುವ ಕೆಲವು ಆಧುನಿಕ ಮೂಲಸೌಕರ್ಯಗಳ ಅಗತ್ಯ ಶಾಲೆಗಿದೆ.


14 Jan 2023

  • ಶಿಕ್ಷಣ

ತಂತ್ರಜ್ಞಾನವು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಮತ್ತು ಅತ್ಯವಶ್ಯಕವಾಗಿರುವ ಪ್ರಪಂಚದಲ್ಲಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಂಪ್ಯೂಟರ್ ಶಿಕ್ಷಣ ದೊರಕುವುದು ಬಹಳ ಮುಖ್ಯ. ದುರದೃಷ್ಟವಶಾತ್, ಭಾರತದಲ್ಲಿ ಅನೇಕ ಗ್ರಾಮೀಣ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು ಒದಗಿಸಲು ಅಗತ್ಯ ಸಂಪನ್ಮೂಲಗಳನ್ನು ಹೊಂದಿಲ್ಲ. ಈ ಕಾರಣದಿಂದಾಗಿಯೇ ಲಾಭರಹಿತ ಸಂಸ್ಠೆಯಾದ ವೆಂಟನಾ ಫೌಂಡೇಶನ್ ಉಡುಪಿಯ ಅಚ್ಚಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎರಡು ಕಂಪ್ಯೂಟರ್ ಸಿಸ್ಟಮ್ ಅನ್ನು ಕೊಡುಗೆಯಾಗಿ ನೀಡಲು ನಿರ್ಧರಿಸಿತು.


10 Jan 2023

  • ಶಿಕ್ಷಣ

ವೆಂಟನಾ ಫೌಂಡೇಶನ್ ಗ್ರಾಮೀಣ ಶಿಕ್ಷಣವನ್ನು ಪ್ರೋತ್ಸಾಹಿಸಲು ಬಲವಾಗಿ ಪ್ರಯತ್ನಿಸುತ್ತಿದೆ ಮತ್ತು ಇತ್ತೀಚೆಗೆ ಉಡುಪಿಯ ಮಲ್ಪೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ನವೀಕರಿಸುವ ಸವಾಲನ್ನು ಕೈಗೆತ್ತಿಕೊಂಡಿದೆ. ಇಲ್ಲಿನ ಸ್ಥಳೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಸುದೀರ್ಘ ಇತಿಹಾಸವನ್ನು ಹೊಂದಿರುವ ಈ ಶಾಲೆಯು ಅದರ ಶಿಥಿಲಗೊಂಡಂತಹ ಕಟ್ಟಡ ಮತ್ತು ಮೂಲ ಸೌಕರ್ಯಗಳ ಅವ್ಯವಸ್ಥೆಯಿಂದ ತೊಂದರೆಯನ್ನು ಅನುಭವಿಸುತ್ತಿದೆ. ಗುಣಮಟ್ಟದ ಶಿಕ್ಷಣದ ಸಲುವಾಗಿ ಸುರಕ್ಷಿತ ಮತ್ತು ಸಮರ್ಪಿತ ವಾತಾವರಣವನ್ನು ಒದಗಿಸುವ ಪ್ರಾಮುಖ್ಯತೆಯನ್ನು ಮನಗಂಡ ರೋಹಿತ್ ಭಟ್ ಮತ್ತು ರವೀಂದ್ರ ಕೆ ನೇತೃತ್ವದ ವೆಂಟನಾ ಫೌಂಡೇಶನ್ ತಂಡವು, ಮುದುಡದ ಉತ್ಸಾಹದೊಂದಿಗೆ ಕಟ್ಟಡವನ್ನು ನವೀಕರಿಸುವ ಅತಿ ದೊಡ್ಡ ಕಾರ್ಯವನ್ನು ಕೈಗೊಂಡಿತು


30 Dec 2022

  • ಶಿಕ್ಷಣ

ವೆಂಟನಾ ಫೌಂಡೇಶನ್ ಜೂನ್ 2022 ರಲ್ಲಿ, ಕುಂದಾಪುರದ ಬಿದ್ಕಲಕಟ್ಟೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಿಂದ ವಿನಂತಿಯನ್ನು ಪಡೆದುಕೊಂಡಿತು. ಶಾಲೆಯು ವಿದ್ಯಾರ್ಥಿಗಳ ದಾಖಾಲಾತಿಯಲ್ಲಿ ಹೆಚ್ಚಳವನ್ನು ಕಂಡುಕೊಂಡಿದೆ ಮತ್ತು ಇದರ ಪರಿಣಾಮವಾಗಿ, ಡೆಸ್ಕ್‌ಗಳು, ಬೆಂಚುಗಳು ಮತ್ತು ಪ್ರಿಂಟರ್‌ಗಳಂತಹ ಅತ್ಯವಶ್ಯಕ ಪರಿಕರಗಳ ಕೊರತೆಯು ಕಂಡುಬಂತು. ಶಿಕ್ಷಣವನ್ನು ಪ್ರಮುಖ ಗುರಿಯನ್ನಾಗಿ ಮಾಡಿಕೊಂಡಿರುವ ವೆಂಟನಾ ಫೌಂಡೇಶನ್‌ ತಕ್ಷಣ ಕ್ರಮ ಕೈಗೊಂಡಿತು ಮತ್ತು ಪರಿಶೀಲನೆಗಾಗಿ ತನ್ನ ತಂಡವನ್ನು ಶಾಲೆಗೆ ಕಳುಹಿಸಿತು.


17 Aug 2022

  • ಶಿಕ್ಷಣ

ಶಿಕ್ಷಣವು ಉಜ್ವಲ ಭವಿಷ್ಯದ ಬುನಾದಿಯಾಗಿದೆ - ಮತ್ತು ವೆಂಟನಾ ಫೌಂಡೇಶನ್ ನಾಳೆಯ ಉಜ್ವಲ ಭವಿಷ್ಯದ ಹಾದಿಯನ್ನು ಸುಗಮಗೊಳಿಸಲು ಗ್ರಾಮೀಣ ಶಿಕ್ಷಣವನ್ನು ಬೆಂಬಲಿಸುವಲ್ಲಿ ದೃಢವಾಗಿ ನಂಬಿಕೆ ಇಟ್ಟಿದೆ. ಜೂನ್ 2022 ರಲ್ಲಿ, ನಿಟ್ಟೂರು ಹಿರಿಯ ಪ್ರಾಥಮಿಕ ಶಾಲೆಯಿಂದ ತಮ್ಮ ಶಾಲಾ ಕಟ್ಟಡದ ದುರಸ್ತಿಗಾಗಿ ಹಣಕಾಸಿನ ಸಹಾಯದ ವಿನಂತಿಯನ್ನು ಫೌಂಡೇಶನ್ ಸ್ವೀಕರಿಸಿತು. ಶಾಲೆಯು 122 ವರ್ಷಗಳ ಶ್ರೀಮಂತ ಇತಿಹಾಸ ಹೊಂದಿದೆ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಜನಪ್ರಿಯತೆಯ ಹೊರತಾಗಿಯೂ, ಇದು 200 ಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳನ್ನು ಸುಶಿಕ್ಷಿತಗೊಳಿಸುತ್ತಿದೆ


25 Jun 2022

  • ಶಿಕ್ಷಣ

ವಿಶೇಷವಾಗಿ ಹೆಣ್ಣುಮಕ್ಕಳಿಗೆ, ಸರಿಯಾದ ನೈರ್ಮಲ್ಯ ಸೌಲಭ್ಯಗಳ ಕೊರತೆಯು ಅನೇಕ ಸ್ಥಳೀಯ ಶಾಲೆಗಳಲ್ಲಿ ಪ್ರಮುಖ ಸಮಸ್ಯೆಯಾಗಿದೆ. ಇದು ಕೇವಲ ಅವರ ಶಿಕ್ಷಣಕ್ಕೆ ಅಡ್ಡಿ ಉಂಟುಮಾಡುವುದಲ್ಲದೆ ಅವರ ಆರೋಗ್ಯ ಮತ್ತು ಸುರಕ್ಷತೆಗೂ ತೊಂದರೆಯನ್ನು ಉಂಟುಮಾಡುತ್ತದೆ. ರೋಹಿತ್ ಭಟ್ ಅವರು ಸ್ಥಾಪಿಸಿದ ಚಾರಿಟೇಬಲ್ ಟ್ರಸ್ಟ್ ವೆಂಟನಾ ಫೌಂಡೇಶನ್, ಕರ್ನಾಟಕದ ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ಶೌಚಾಲಯಗಳನ್ನು ನಿರ್ಮಿಸುವ ಉದ್ದೇಶವನ್ನು ಹಮ್ಮಿಕೊಂಡಿದೆ.