ದತ್ತಿ ಕಾರ್ಯಗಳು
ತಾಯ್ನಾಡಿನಿಂದಲೇ ಆರಂಭವಾಗುತ್ತವೆ

ವೆಂಟನಾ ಫೌಂಡೇಶನ್, ಇದನ್ನು ಸಮಾಜಮುಖಿ ಕಾರ್ಯಗಳಿಗಾಗಿ, ರೋಬೋಸಾಫ್ಟ್ ಟೆಕ್ನಾಲಜೀಸ್ ಮತ್ತು 99ಗೇಮ್ಸ್ ಸ್ಥಾಪಕರಾದ ಶ್ರೀ ರೋಹಿತ್ ಭಟ್ ತಮ್ಮ ಸಮಾನ ಮನಸ್ಕ ಸಹೋದ್ಯೋಗಿಗಳೊಂದಿಗೆ 2022 ರಲ್ಲಿ ಸ್ಥಾಪಿಸಿದರು. ಇದೊಂದು ಲಾಭ-ರಹಿತ ಸಂಸ್ಥೆಯಾಗಿದ್ದು, ನಾವು 'ಜಗತ್ತಿನ ಮೇಲೆ ಶಾಶ್ವತ ಪ್ರಭಾವ ಬೀರುವ ಉದಾತ್ತ ಕಾರ್ಯಗಳು ಸಣ್ಣ ಆರಂಭ ಹೊಂದಿವೆ' ಎಂಬುದರ ಮೇಲೆ ನಂಬಿಕೆಯಿರಿಸಿದ್ದೇವೆ. ಇಲ್ಲಿ ಸಣ್ಣ ಆರಂಭ ಅಂದರೆ ನಮ್ಮ ಸಣ್ಣ ಪಟ್ಟಣವಾದ ಉಡುಪಿಯಿಂದ ಎಂದರ್ಥ. ಇಲ್ಲಿ ನಾವು ಜೀವನದ ಎಲ್ಲಾ ಸ್ತರದ ಜನರನ್ನು ಭೇಟಿಯಾಗಿದ್ದೇವೆ, ವಿಭಿನ್ನ ಸಂಸ್ಕೃತಿಗಳಿಗೆ ಸಾಕ್ಷಿಯಾಗಿದ್ದೇವೆ, ಮತ್ತು ಜಗತ್ತಿನಾದ್ಯಂತ ಕ್ಷೀಣಿಸುತ್ತಿರುವ ಪ್ರಶಾಂತವಾದ ಹಸಿರು ಪ್ರಕೃತಿಯನ್ನು ಆನಂದಿಸುತ್ತೇವೆ.

ತಂತ್ರಜ್ಞಾನದ ಮೂಲಕ ಈಗಾಗಲೇ ಯಶಸ್ಸು ಸಾಧಿಸಿರುವ ನಮ್ಮ ಸಂಸ್ಥಾಪಕರಿಗೆ, ಜಾಗತಿಕ ಪ್ರವೃತ್ತಿಯನ್ನು ತಲುಪುವ ಗುರಿಯಲ್ಲಿರುವಾಗ ಸಮಾಜವು ಸಂಸ್ಕೃತಿ, ಪರಂಪರೆ ಮತ್ತು ಪರಿಸರವನ್ನು ಮರೆತುಬಿಡುತ್ತದೆ ಎಂಬ ಅರಿವಿತ್ತು. ಭವಿಷ್ಯದ ದಿನಗಳಿಗೆ ಡಿಜಿಟಲ್ ಜಗತ್ತಿನ ಅವಕಾಶದ ಬಾಗಿಲು ತೆರೆಯುತ್ತಿದ್ದಂತೆ, ಹಿಂದಿನದ್ದನ್ನು ಕಳೆದುಕೊಳ್ಳದಂತೆ ಖಚಿತಪಡಿಸುವುದಕ್ಕಾಗಿ ನಾವು ಒಂದು ಆಶಯವನ್ನು ಹುಟ್ಟುಹಾಕಿದ್ದೇವೆ. ಅದಕ್ಕಾಗಿ ನಾವು ನಮ್ಮ ಸ್ಥಳೀಯ ಪರಿಸರದಲ್ಲಿನ 4 ಪ್ರಮುಖ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಿದ್ದೆವೆ.

I