ನಮ್ಮ
ತಂಡ

ರೋಹಿತ್ ಭಟ್

ರೋಹಿತ್ ಅವರು ಯಶಸ್ವೀ ಉದ್ಯಮಗಳ ಸರಣಿಯ ಸ್ಥಾಪಕ: ರೋಬೊಸಾಫ್ಟ್ ಟೆಕ್ನಾಲಜೀಸ್, ಗ್ಲೋಬಲ್ ಡಿಲೈಟ್ ಮತ್ತು 99 ಗೇಮ್ಸ್. ಅವರು 1996 ರಲ್ಲಿ ತಮ್ಮ ಪ್ರಥಮ ಗ್ರಾಹಕರಾಗಿ Apple Inc ನೊಂದಿಗೆ ರೋಬೊಸಾಫ್ಟ್ ಟೆಕ್ನಾಲಜೀಸ್ ಅನ್ನು ಆರಂಭಿಸಿದರು, ಮತ್ತು 25 ವರ್ಷಗಳ ಬಳಿಕ ಜಪಾನಿನ TechnoPro ರೋಬೊಸಾಫ್ಟ್ ಕಂಪನಿಯನ್ನು $100m+ ಮೊತ್ತ ನೀಡಿ ಖರೀದಿಸಿತು.

ಪ್ರಸ್ತುತ ರೋಹಿತ್ ಅವರು ಗೇಮಿಂಗ್‌ ಕ್ಷೇತ್ರದಲ್ಲೂ ಇಂತಹ ಸಾಧನೆಯನ್ನು 99ಗೇಮ್ಸ್ ಮೂಲಕ ಮಾಡಲು ತೊಡಗಿಸಿಕೊಂಡಿದ್ದಾರೆ. ವೃತ್ತಿಗೆ ಸಂಬಂಧಿಸಿದ ತಮ್ಮ ಜವಾಬ್ದಾರಿಗಳನ್ನು ಮುಗಿಸಿ ಈಗ ತಮ್ಮ ಬೆಳವಣಿಗೆ ಮತ್ತು ಯಶಸ್ಸಿಗೆ ಕಾರಣವಾದ ಸಮಾಜಕ್ಕೆ ಕೊಡುಗೆ ನೀಡಲು ಉತ್ಸುಕರಾಗಿದ್ದಾರೆ. ಕೃಷಿ ಮತ್ತು ಮಕ್ಕಳಿಗೆ ಶಿಕ್ಷಣ ಒದಗಿಸುವ ಕುರಿತು ಅವರಿಗೆ ಒಲವಿದ್ದು ಇದಕ್ಕೆ ಸಂಬಂಧಿಸಿದ ಪ್ರಾಜೆಕ್ಟ್‌ಗಳಲ್ಲಿ ಅತೀವ ಆಸಕ್ತಿ ಹೊಂದಿದ್ದಾರೆ.

ಶಿಲ್ಪಾ ಭಟ್

ಭಾರತದ ಪ್ರತಿಷ್ಠಿತ ಗೇಮಿಂಗ್ ಕಂಪನಿ, 99 ಗೇಮ್ಸ್ ನ ಪ್ರೊಡಕ್ಷನ್ ಹೌಸ್ ಅನ್ನು ಶಿಲ್ಪಾರವರು ನಡೆಸುತ್ತಿದ್ದಾರೆ – ಉತ್ಕ್ರಷ್ಟತೆ ಮತ್ತು ಪರಿಪೂರ್ಣತೆ ಅವರ ಕಾರ್ಯಶೈಲಿ ಯಾಗಿದೆ.

ಸಮಾಜದಲ್ಲಿ ಪ್ರಚಲಿತವಾಗಿರುವ ನಂಬಿಕೆಗೆ ತದ್ವಿರುದ್ಧವಾಗಿ, ಗ್ರಾಮೀಣ ಶಾಲೆಗಳಲ್ಲಿ ಮತ್ತು ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ಪಡೆಯುವುದರಿಂದ ವೃತ್ತಿ ಸಂಬಂಧಿತ ಬೆಳವಣಿಗೆಯಲ್ಲಿ ಯಾವುದೇ ಹಿಂಜರಿತ ಉಂಟಾಗುವುದಿಲ್ಲ ಎಂಬುದು ಅವರ ನಿಲುವಾಗಿದೆ. ಬಾಲ್ಯಾವಸ್ಥೆಯಲ್ಲಿ ಶಿಕ್ಷಣದ ಬಲವಾದ ಚೌಕಟ್ಟಿನೊಳಗೆ ಮಕ್ಕಳನ್ನು ಬೆಳೆಸಬೇಕು ಎಂಬ ಜಪಾನಿಯರ ನಂಬಿಕೆಯಿಂದ ಅವರು ಸ್ಫೂರ್ತಿ ಪಡೆದಿದ್ದಾರೆ – ಮತ್ತು ಚಿಕ್ಕಮಕ್ಕಳಿಗಾಗಿ ಇರುವ ನಮ್ಮ ಎಲ್ಲಾ ಶೈಕ್ಷಣಿಕ ಪ್ರಾಜೆಕ್ಟ್‌ಗಳನ್ನು ಬೆಂಬಲಿಸಲು ಇದು ಶಿಲ್ಪಾರಿಗೆ ಸಹಾಯ ಮಾಡಿದೆ. ನಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸುವ ಕಾಳಜಿಯೂ ಅವರಿಗಿದ್ದು ಅಂತಹ ಯೋಜನೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ರವೀಂದ್ರ ಕೆ

ರವೀಂದ್ರವರು ಮೂಲತಃ ಒಬ್ಬ ಟೆಕ್ಕಿ. ಅವರು ಟ್ರೇಡಿಂಗ್ ಬಿಸಿನೆಸ್‌ಗೆ ಸಾಫ್ಟ್‌ವೇರ್‌ಗಳನ್ನು ತಯಾರಿಸುವ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.

ಪರಿಸರ ಸಂರಕ್ಷಣೆ, ನೈರ್ಮಲ್ಯ ಮತ್ತು ಸ್ವಚ್ಛತೆ ಪಾಲನೆಯ ಕುರಿತು ಅವರು ಹೊಂದಿರುವ ಆಸಕ್ತಿ ಅವರನ್ನು ನಮ್ಮ ಕಡೆ ಸೆಳೆದಿದೆ. ಅವರು ದೇಹಾರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ವಿಶೇಷ ಒಲವು ಹೊಂದಿದ್ದು ಸೈಕ್ಲಿಂಗ್ ಅವರ ಹವ್ಯಾಸವಾಗಿದೆ – ಮತ್ತು ನಮ್ಮ ಎಲ್ಲಾ ಹಸುರು ಉಪಕ್ರಮಗಳನ್ನು ಹುಡುಕುವಲ್ಲಿ, ಕಾರ್ಯಾಚರಣೆಗೆ ತರುವಲ್ಲಿ ಮತ್ತು ಮುನ್ನಡೆಸಿಕೊಂಡು ಹೋಗುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದ್ದಾರೆ. ನಮ್ಮ ಕಲೆ ಮತ್ತು ಸಾಂಸ್ಕೃತಿಕ ಪುನರುಜ್ಜೀವನ ಕ್ಕಾಗಿಯೂ ಅವರು ಶ್ರಮಿಸುತ್ತಿದ್ದಾರೆ.

ಬೆಂಬಲ ತಂಡ

Sudhir_A

ಸುಧೀರ್ ಅಣ್ಣಿ

Sudarshan Pai

ಸುದರ್ಶನ ಪೈ

Sushma_Vore

ಸುಷ್ಮಾ ವೋರೆ

Vignesh_G_Shet

ವಿಘ್ನೇಶ್ ಜಿ ಶೇಟ್