ನಮ್ಮ ಯೋಜನೆಗಳು

24 Nov 2024
- ಸಾಂಸ್ಕೃತಿಕ ಪುನರುಜ್ಜೀವನ
ಶಾಸ್ತ್ರೀಯ ಕಲಾ ಪ್ರಕಾರಗಳಿಗೆ ಬದ್ಧತೆಸಹಿತದ ಪೋಷಣೆಯ ಅಗತ್ಯವಿರುವ ಈ ಕಾಲದಲ್ಲಿ, ಸಾಂಪ್ರದಾಯಿಕ ನೃತ್ಯ ಪರಂಪರೆಯ ಅಸ್ತಿತ್ವವನ್ನು ಉಳಿಸಿಕೊಂಡ ಕೀರ್ತಿ ಸೃಷ್ಟಿ ನೃತ್ಯ ಕಲಾಕುಟೀರಕ್ಕೆ ಸಲ್ಲುತ್ತದೆ. ನೃತ್ಯ ವಿದುಷಿ ಡಾ.ಮಂಜರಿ ಚಂದ್ರ ಪುಷ್ಪರಾಜ್ ಅವರ ಮಾರ್ಗದರ್ಶನದಲ್ಲಿ ಈ ಸಂಸ್ಥೆಯು ಭರತನಾಟ್ಯ ಶಿಕ್ಷಣದಲ್ಲಿ ಪ್ರಜ್ವಲ ದೀಪವಾಗಿ ಬೆಳಗುತ್ತಿದೆ, 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ದಿವ್ಯ ಕಲಾ ಪ್ರಕಾರದ ಸೂಕ್ಷ್ಮತೆಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ.

23 Aug 2024
- ಪರಿಸರ ಸಂರಕ್ಷಣೆ
ಹಸುರು ನಿರಂತರವಾಗಿ ಕಡಿಮೆಯಾಗುತ್ತಾ ಹೋಗುವುದನ್ನು ನೋಡುವಾಗ, ಪರಿಸರ ಸಂರಕ್ಷಣೆ ಮಹತ್ವದ್ದೆನಿಸುತ್ತದೆ - ಮತ್ತು ವೆಂಟನಾ ಫೌಂಡೇಶನ್ ಹಾವಂಜೆ ಗ್ರಾಮದಲ್ಲಿ ಭರವಸೆಯ ಉಪಕ್ರಮವನ್ನು ಪ್ರಾರಂಭಿಸುವ ಮೂಲಕ ಅರಣ್ಯ ಬೆಳೆಸುವತ್ತ ತನ್ನ ಮೊದಲ ಮಹತ್ವದ ಹೆಜ್ಜೆಯನ್ನು ತೆಗೆದುಕೊಂಡಿದೆ. ಈ ಯೋಜನೆಯು ಪರಿಸರ ಸಂರಕ್ಷಣೆಗೆ ಕೇವಲ ಬದ್ಧತೆಯನ್ನು ತೋರಿಸುವುದಷ್ಟೇ ಅಲ್ಲ, ಇದು ಜೀವ ವೈವಿಧ್ಯತೆಯನ್ನು ಸಂರಕ್ಷಿಸುವ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸುವ ಚಿಂತನಶೀಲ ವಿಧಾನವಾಗಿದೆ.

21 Aug 2024
- ಸಾಂಸ್ಕೃತಿಕ ಪುನರುಜ್ಜೀವನ
ಅಭಿರುಚಿ ಮತ್ತು ಧ್ಯೇಯ ಪರಸ್ಪರ ಕಲೆತಾಗ, ಪರಿವರ್ತನಕಾರಿ ಉಪಕ್ರಮಗಳು ಹುಟ್ಟಿಕೊಳ್ಳುತ್ತವೆ. ಹಿರಿಯ ಕಲಾವಿದ ಶೈಲೇಶ್ ಕೋಟ್ಯಾನ್ ಸ್ಥಾಪಿಸಿದ ಉಡುಪಿಯ ಔರಾ ಕಲಾಶಾಲೆಯ ಕಥೆ ಇದೇ ರೀತಿಯದ್ದಾಗಿದೆ, ಇಲ್ಲಿ ವಿದ್ಯಾರ್ಥಿಗಳ ಆರ್ಥಿಕ ನ್ಯೂನತೆಗಳನ್ನು ಲೆಕ್ಕಿಸದೆ ಕಲಾತ್ಮಕ ಕನಸುಗಳನ್ನು ಪೋಷಿಸಲಾಗುತ್ತದೆ. ಇತ್ತೀಚೆಗೆ, ವೆಂಟನಾ ಫೌಂಡೇಶನ್ ಸ್ಥಳೀಯ ಕಲಾ ಶಿಕ್ಷಣವನ್ನು ಬೆಳೆಸುವ ತನ್ನ ಬದ್ಧತೆಗೆ ಪ್ರತಿಯಾಗಿ ಈ ಉದಾತ್ತ ಪ್ರಯತ್ನವನ್ನು ಬೆಂಬಲಿಸುವ ನಿರ್ಧಾರ ಕೈಗೊಂಡಿತು.

27 Jul 2024
- ಸಮುದಾಯದ ಸೇವೆ
ಉಡುಪಿ ಬೈಲೂರಿನಲ್ಲಿ, ಶ್ರೀಮತಿ ತನುಳಾ ತರುಣ್ ಅವರು ಹಿರಿಯರಿಗಾಗಿ ಸ್ಥಾಪಿಸಿದ ಆರೈಕೆ ಮನೆ ಹೊಸಬೆಳಕು, ಇಲ್ಲಿ ಒಂದು ಅಸಾಧಾರಣ ಕರುಣೆಯ ಕಥೆ ಬಿಚ್ಚಿಕೊಳ್ಳುತ್ತದೆ. ಕೌಟುಂಬಿಕ ಆಸರೆಯಿಲ್ಲದೆ ಕಂಗೆಟ್ಟ ಹಿರಿಯ ನಾಗರಿಕರಿಗಾಗಿ ಇರುವ ಈ ಆಶ್ರಯ ತಾಣ ಅವರಿಗೆ ಆಶಾಕಿರಣವಾಗಿ ಪರಿಣಮಿಸಿದ್ದು, ಸಮುದಾಯದ ಕಾಳಜಿ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ಒಂದು ಉತ್ತಮ ಉದಾಹರಣೆಯಾಗಿದೆ.

14 May 2024
- ಶಿಕ್ಷಣ
ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುವ ನಮ್ಮ ಬದ್ಧತೆಗಾಗಿ ಏರ್ಪಡಿಸುವ ವೆಂಟನಾ ಫೌಂಡೇಶನ್‌ನ ವಾರ್ಷಿಕ ಪುಸ್ತಕ ದೇಣಿಗೆ ಅಭಿಯಾನವು, ಉಡುಪಿ ಸುತ್ತಲಿನ ಪ್ರದೇಶದ 16 ಶಾಲೆಗಳಲ್ಲಿ 1,750 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪುವುದರೊಂದಿಗೆ ಈ ವರ್ಷ ಹೊಸ ಮೈಲಿಗಲ್ಲುಗಳನ್ನು ಮುಟ್ಟಿದೆ. ವೆಂಟನಾ ಫೌಂಡೇಶನ್‍ನ ಶೈಕ್ಷಣಿಕ ವಿಸ್ತರಣೆಯ ಅಡಿಪಾಯವಾಗಿ ಮಾರ್ಪಟ್ಟಿರುವ ಈ ಉಪಕ್ರಮವು ಶಿಕ್ಷಣ ವಂಚಿತ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಸಂಪನ್ಮೂಲಗಳನ್ನು ಒದಗಿಸುವ ಪರಿವರ್ತನಕಾರಿ ಸಾಮರ್ಥ್ಯದ ಶ್ರೇಷ್ಟತೆಯೇನೆಂದು ತೋರ್ಪಡಿಸುತ್ತದೆ.

25 Nov 2023
- ಸಾಂಸ್ಕೃತಿಕ ಪುನರುಜ್ಜೀವನ
ಸಾಂಪ್ರದಾಯಿಕ ಕಲಾ ಪ್ರಕಾರಗಳು ತಮ್ಮ ಸ್ಥಾನವನ್ನು ಕಂಡುಕೊಳ್ಳಲು ಹೆಣಗಾಡುತ್ತಿರುವ ಈ ಯುಗದಲ್ಲಿ, ನಿಟ್ಟೆ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಯಕ್ಷಸಂಗಮ ತಂಡವು, ಯುವ ಮನಸ್ಸುಗಳು ಸಾಂಸ್ಕೃತಿಕ ಪರಂಪರೆಯನ್ನು ಅಪ್ಪಿಕೊಂಡಾಗ ಮಾತ್ರ ಅದನ್ನು ಉಳಿಸುವುದಷ್ಟೇ ಅಲ್ಲ ಅದರ ಅಭಿವೃದ್ಧಿ ಕೂಡ ಸಾಧ್ಯ ಎಂಬುದನ್ನು ಸಾಬೀತುಪಡಿಸುತ್ತಿದೆ. ಆರು ಸ್ಪರ್ಧೆಗಳಲ್ಲಿ ನಾಲ್ಕರಲ್ಲಿ ಚಾಂಪಿಯನ್ ಪ್ರಶಸ್ತಿಗಳನ್ನು ಮತ್ತು ಹಲವಾರು ವೈಯಕ್ತಿಕ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡು ಯಕ್ಷಸಂಗಮ ತಂಡವು ಕಲಾತ್ಮಕ ಶ್ರೇಷ್ಠತೆಯ ಜ್ಯೋತಿಯಾಗಿ ಹೊರಹೊಮ್ಮಿದೆ.

31 Mar 2023
- ಸಾಂಸ್ಕೃತಿಕ ಪುನರುಜ್ಜೀವನ
ಕಲೆ ಎಂಬುದು ಎಂದಿಗೂ ಅಭಿವ್ಯಕ್ತಿ ಮತ್ತು ರಚನಶಕ್ತಿಯ ಪ್ರಬಲ ಸಾಧನವಾಗಿದೆ, ಆದರೆ ಅನೇಕ ಮಹತ್ವಾಕಾಂಕ್ಷಿ ಕಲಾವಿದರಿಗೆ, ಕಾರ್ಯಾಗಾರಗಳು ಮತ್ತು ತರಬೇತಿಗೆ ಸೇರುವುದು ಒಂದು ಸವಾಲಾಗಿದೆ. ಈ ಕಾರಣಕ್ಕಾಗಿಯೇ ಉಡುಪಿಯ ಸ್ಥಳೀಯ ಕಲಾವಿದರು ಮತ್ತು ಭಾವನಾ ಫೌಂಡೇಶನ್ ಹಾಗೂ ಭಾಸ ಗ್ಯಾಲರಿಯಂತಹ ಕಲಾ ಸಂಸ್ಥೆಗಳಿಗೆ ಬೆಂಬಲ ನೀಡಲು ವೆಂಟನಾ ಫೌಂಡೇಶನ್ ಬದ್ಧವಾಗಿದೆ.