’ಹೊಸಬೆಳಕು’ ಹಿರಿಯ ನಾಗರಿಕರ ಆಶ್ರಮಕ್ಕೆ ಭರವಸೆಯ ಕಿರಣ
Published on 27 Jul 2024
- ಸಮುದಾಯದ ಸೇವೆ
ಉಡುಪಿ ಬೈಲೂರಿನಲ್ಲಿ, ಶ್ರೀಮತಿ ತನುಳಾ ತರುಣ್ ಅವರು ಹಿರಿಯರಿಗಾಗಿ ಸ್ಥಾಪಿಸಿದ ಆರೈಕೆ ಮನೆ ಹೊಸಬೆಳಕು, ಇಲ್ಲಿ ಒಂದು ಅಸಾಧಾರಣ ಕರುಣೆಯ ಕಥೆ ಬಿಚ್ಚಿಕೊಳ್ಳುತ್ತದೆ. ಕೌಟುಂಬಿಕ ಆಸರೆಯಿಲ್ಲದೆ ಕಂಗೆಟ್ಟ ಹಿರಿಯ ನಾಗರಿಕರಿಗಾಗಿ ಇರುವ ಈ ಆಶ್ರಯ ತಾಣ ಅವರಿಗೆ ಆಶಾಕಿರಣವಾಗಿ ಪರಿಣಮಿಸಿದ್ದು, ಸಮುದಾಯದ ಕಾಳಜಿ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ಒಂದು ಉತ್ತಮ ಉದಾಹರಣೆಯಾಗಿದೆ.
ಮೂಲತಃ ಕಾರವಾರದವರಾದ ಶ್ರೀಮತಿ ತರುಣ್ ಅವರು ಸಮಾಜದಿಂದ ಕಡೆಗಣಿಸಲ್ಪಟ್ಟವರಿಗೆ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ದಶಕಗಳ ಹಿಂದೆ ಉಡುಪಿಗೆ ಬಂದಿಳಿದರು. ಅವರ ಉದಾತ್ತ ಉಪಕ್ರಮ, ಹೊಸಬೆಳಕು ಸಣ್ಣ ಮಟ್ಟದಲ್ಲಿ ಆರಂಭಗೊಂಡು ಈಗ ಆರೈಕೆ ಮತ್ತು ಒಡನಾಟದ ಅಗತ್ಯವಿರುವ ಹಿರಿಯ ವ್ಯಕ್ತಿಗಳಿಗೆ ಪ್ರಮುಖ ಬೆಂಬಲ ವ್ಯವಸ್ಥೆಯಾಗಿ ಬೆಳೆದು ನಿಂತಿದೆ.
ಇತ್ತೀಚೆಗೆ, ಸಂಸ್ಥೆಯು ಬೈಲೂರಿನಲ್ಲಿರುವ ಹೊಸ ಸೌಲಭ್ಯಕ್ಕೆ ಸ್ಥಳಾಂತರಗೊಳ್ಳುವ ಮೂಲಕ ಮಹತ್ವದ ಮೈಲಿಗಲ್ಲನ್ನು ತಲುಪಿತು, ಕಟ್ಟಡಕ್ಕೆ ಉದಾರ ದೇಣಿಗೆ ಸಿಕ್ಕಿದ್ದರಿಂದ ಇದು ಸಾಧ್ಯವಾಯಿತು. ಆದಾಗ್ಯೂ, ಪ್ರತಿ ತಿಂಗಳು ಆಶ್ರಯ ಕೇಳಿ ಬರುತ್ತಿರುವ ನಿವಾಸಿಗಳ ಸಂಖ್ಯೆಯು ಹೆಚ್ಚುತ್ತಿರುವಾಗ, ಅಗತ್ಯ ಪೂರೈಕೆಗಳನ್ನು ಮತ್ತು ಆರೈಕೆಯನ್ನು ನಿರ್ವಹಿಸುವ ಸವಾಲುಗಳು ಹೆಚ್ಚುತ್ತಲೇ ಇರುತ್ತವೆ.
ಮಂಗಳೂರಿನ ಪ್ರಮುಖ ವೈದ್ಯರೊಬ್ಬರು ಹೊಸಬೆಳಕು ಆರೈಕೆ ಮನೆಯ ತುರ್ತು ಅಗತ್ಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಿದ್ದು ಮಹತ್ವದ ತಿರುವಾಗಿ ಪರಿಣಮಿಸಿತು. ಈ ಡಿಜಿಟಲ್ SOS, ವೆಂಟನಾ ಫೌಂಡೇಶನ್‌ನ ಗಮನ ಸೆಳೆಯಿತು, ಮತ್ತು ತಕ್ಷಣದ ಕ್ರಮ ಕೈಗೊಂಡಿತು. ನಿವಾಸಿಗಳ ಸೌಕರ್ಯ ಮತ್ತು ಘನತೆಯನ್ನು ಕಾಪಾಡಲು ಅಗತ್ಯ ದಿನಸಿ ಸಾಮಗ್ರಿಗಳು ಮತ್ತು ವಯಸ್ಕರ ಡೈಪರ್‌ಗಳನ್ನು ಒದಗಿಸುವ ಮೂಲಕ ಫೌಂಡೇಶನ್ ಮಹತ್ವದ ಊರುಗೋಲಾಗಿ ಸಹಕರಿಸಿತು.
"ಇಲ್ಲಿನ ಪ್ರತಿಯೊಬ್ಬ ಹಿರಿಯ ವ್ಯಕ್ತಿಯ ಬಳಿ ತನ್ನದೇ ಕಥೆಯಿದೆ, ಮತ್ತು ಪ್ರತಿಯೊಬ್ಬರೂ ಘನತೆಯಿಂದ ಬದುಕಲು ಅರ್ಹರು," ಎಂದು ಶ್ರೀಮತಿ ತರುಣ್ ಹೇಳುತ್ತಾರೆ. ವೆಂಟನಾ ಫೌಂಡೇಶನ್‌ನಂತಹ ಸಂಸ್ಥೆಗಳ ಬೆಂಬಲವು ನಮ್ಮ ನಿವಾಸಿಗಳು ತಾವು ಅರ್ಹವಾಗಿ ಪಡೆಯಬೇಕಾದ ಕಾಳಜಿ ಪಡೆಯುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ."
ಈ ಮಧ್ಯಪ್ರವೇಶಿಕೆಯ ತರಂಗ ಪರಿಣಾಮವು ಗಮನಾರ್ಹವಾಗಿದೆ. ವೈದ್ಯರ ಟ್ವೀಟ್ ಮತ್ತು ವೆಂಟನಾ ಫೌಂಡೇಶನ್‌ನ ತ್ವರಿತ ಸ್ಪಂದನೆಯ ನಂತರ, ಹಲವಾರು ದಾನಿಗಳು ಹೊಸಬೆಳಕು ಆಶ್ರಯತಾಣವನ್ನು ಬೆಂಬಲಿಸಲು ಮುಂದೆ ಬಂದರು, ಸಂಸ್ಥೆಯ ಸಂಪನ್ಮೂಲಗಳನ್ನು ಸ್ಥಿರಗೊಳಿಸಲು ಸಹಾಯ ಮಾಡುವ ಉದಾರತೆಯ ಸರಣಿ ಪ್ರತಿಕ್ರಿಯೆ ಆರಂಭಗೊಂಡಿತು.
ಸಮುದಾಯದ ಈ ಸ್ಪಂದನೆ ಸಹಾಯ ಹಸ್ತದ ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚುವರೊಂದಿಗೆ ಸಂಪರ್ಕ ಏರ್ಪಡಿಸುವಲ್ಲಿ ಸಾಮಾಜಿಕ ಮಾಧ್ಯಮದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಈ ಘಟನೆಯ ಬಳಿಕ ಅನೇಕ ದಾನಿಗಳು ಸಹಾಯ ನೀಡಲು ಮುಂದೆ ಬಂದರಾದರೂ, ಈ ದುರ್ಲಭ ಸಮಯದಲ್ಲಿ ಮೊದಲು ಸ್ಪಂದಿಸಿ ಸರಿಯಾದ ಸಮಯದಲ್ಲಿ ಮಾನವತೆಯನ್ನು ಎತ್ತಿಹಿಡಿಯುವ ಔಚಿತ್ಯವನ್ನು ತೋರಿಸಿಕೊಟ್ಟಿದ್ದಕ್ಕಾಗಿ ವೆಂಟನಾ ಫೌಂಡೇಶನ್ ಹೆಮ್ಮೆಪಡುತ್ತದೆ.
ಹೊಸಬೆಳಕು ವಯೋವೃದ್ಧರ ಆರೈಕೆಗೆ ಒಂದು ಉತ್ತಮ ಮಾದರಿಯಾಗಿ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತಿದೆ, ಸಮುದಾಯದ ಬೆಂಬಲ ಮತ್ತು ಸಂಘಟಿತ ದತ್ತಿ ಸೇವೆ ನಮ್ಮ ಹಿರಿಯ ನಾಗರಿಕರ ಜೀವನದಲ್ಲಿ ಹೇಗೆ ಮಹತ್ವದ ಬದಲಾವಣೆಯನ್ನು ತರಬಲ್ಲುದು ಎಂಬುದಕ್ಕೆ ಸಾಕ್ಷಿಯಾಗಿದೆ. ಶ್ರೀಮತಿ ತರುಣ್ ಆಗಾಗ್ಗೆ ಹೇಳುವಂತೆ, "ನಮ್ಮ ಹಿರಿಯರನ್ನು ನೋಡಿಕೊಳ್ಳುವ ಮೂಲಕ, ನಾವು ನಮ್ಮ ಭೂತಕಾಲವನ್ನು ಗೌರವಿಸುತ್ತೇವೆ ಮತ್ತು ನಮ್ಮ ಭವಿಷ್ಯವನ್ನು ಪ್ರೇರೇಪಿಸುತ್ತೇವೆ." ನಮ್ಮ ಸಮಾಜದ ಹೆಣಿಗೆಯನ್ನು ಬಲಪಡಿಸುವ ಇಂತಹ ಉದಾತ್ತ ಉಪಕ್ರಮಗಳನ್ನು ಬೆಂಬಲಿಸಲು ವೆಂಟನಾ ಫೌಂಡೇಶನ್ ಬದ್ಧವಾಗಿದೆ.