ಪಟ್ಟಚಿತ್ರ ಕಾರ್ಯಾಗಾರದ ಮೂಲಕ ಕಲಾ ಕ್ಷೇತ್ರಕ್ಕೆ ಬೆಂಬಲ

Published on 31 Mar 2023

  • ಸಾಂಸ್ಕೃತಿಕ ಪುನರುಜ್ಜೀವನ

ಕಲೆ ಎಂಬುದು ಎಂದಿಗೂ ಅಭಿವ್ಯಕ್ತಿ ಮತ್ತು ರಚನಶಕ್ತಿಯ ಪ್ರಬಲ ಸಾಧನವಾಗಿದೆ, ಆದರೆ ಅನೇಕ ಮಹತ್ವಾಕಾಂಕ್ಷಿ ಕಲಾವಿದರಿಗೆ, ಕಾರ್ಯಾಗಾರಗಳು ಮತ್ತು ತರಬೇತಿಗೆ ಸೇರುವುದು ಒಂದು ಸವಾಲಾಗಿದೆ. ಈ ಕಾರಣಕ್ಕಾಗಿಯೇ ಉಡುಪಿಯ ಸ್ಥಳೀಯ ಕಲಾವಿದರು ಮತ್ತು ಭಾವನಾ ಫೌಂಡೇಶನ್ ಹಾಗೂ ಭಾಸ ಗ್ಯಾಲರಿಯಂತಹ ಕಲಾ ಸಂಸ್ಥೆಗಳಿಗೆ ಬೆಂಬಲ ನೀಡಲು ವೆಂಟನಾ ಫೌಂಡೇಶನ್ ಬದ್ಧವಾಗಿದೆ.

ಇತ್ತೀಚೆಗೆ, ಹೆಸರಾಂತ ಕಲಾವಿದ ಜನಾರ್ದನ ಹಾವಂಜೆ ಮತ್ತು ಅವರ ಭಾವನಾ ಫೌಂಡೇಶನ್‍ನ  ಕಾರ್ಯಾಗಾರಗಳನ್ನು ಬೆಂಬಲಿಸಲು ವೆಂಟನಾ ಫೌಂಡೇಶನ್ ಆರ್ಥಿಕ ಸಹಾಯವನ್ನು ನೀಡಿತು. ಈ ಕಾರ್ಯಾಗಾರ ಒಡಿಶಾದ ಪುರಾತನ ಕಲಾ ಪ್ರಕಾರವಾದ ಪಟ್ಟಚಿತ್ರವನ್ನು ಕೇಂದ್ರೀಕರಿಸಿತ್ತು ಮತ್ತು ಸ್ಥಳೀಯ ಕಲಾವಿದರು ಹಾಗೂ ಕಲಾ ಉತ್ಸಾಹಿಗಳಿಗೆ ಈ ಕಲೆಯ ಬಗ್ಗೆ ಕೆಲವು ಅತ್ಯುತ್ತಮ ವಿಷಯಗಳನ್ನು ತಿಳಿದುಕೊಳ್ಳಲು ಉತ್ತಮ ಅವಕಾಶವಾಗಿತ್ತು.

ಒಡಿಶಾದ ಶ್ರೀಮತಿ ಗೀತಾಂಜಲಿ ದಾಸ್ ಅವರ ನೇತೃತ್ವದಲ್ಲಿ ನಡೆಸಲಾದ ಈ ಕಾರ್ಯಾಗಾರದಲ್ಲಿ ಪಟ್ಟಚಿತ್ರದ ಇತಿಹಾಸದಿಂದ ಹಿಡಿದು ಕಲಾ ಪ್ರಕಾರದಲ್ಲಿ ಬಳಸುವ ವಿಶಿಷ್ಟ ನೈಸರ್ಗಿಕ ಬಣ್ಣಗಳವರೆಗೆ ಎಲ್ಲ ವಿಷಯಗಳು ಒಳಗೊಂಡಿದ್ದವು. ಇದರಲ್ಲಿ ಭಾಗವಹಿಸುವವರಿಗೆ ತಮ್ಮ ದಿನನಿತ್ಯದ ಜೀವನದಲ್ಲಿ ಕಂಡುಬರುವ ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ಬಣ್ಣಗಳನ್ನು ಹೇಗೆ ರಚಿಸುವುದು ಎಂಬುದನ್ನು ಕಲಿಸಲಾಯಿತು, ಇದರಿಂದ ಅವರ ಕಲಾತ್ಮಕ ಅನ್ವೇಷಣೆಗಳಲ್ಲಿ ಸಮರ್ಥನೀಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಸಹಾಯವಾಯಿತು.

ವೆಂಟನಾ ಫೌಂಡೇಶನ್‍‍ ಕಾರ್ಯಾಗಾರ ನಡೆಸಲು ಆರ್ಥಿಕ ಬೆಂಬಲ ನೀಡಿದ ಕಾರಣದಿಂದಾಗಿ ಅನೇಕ ಮಹತ್ವಾಕಾಂಕ್ಷಿ ಕಲಾವಿದರು ಮತ್ತು ಉತ್ಸಾಹಿಗಳಿಗೆ ಭಾಗವಹಿಸಲು ಸಹಾಯವಾಯಿತು. ಅನುಭವಿ ಕಲಾವಿದರಿಂದ ಕಲಿಯಲು ಉತ್ಸುಕರಾಗಿದ್ದ ಪ್ರೇಕ್ಷಕರಲ್ಲಿ  ಕಲೆಯ ಬಗ್ಗೆ ಉತ್ಸಾಹ ಮತ್ತು ತೀವ್ರಾಸಕ್ತಿಯನ್ನು ನೋಡುವುದು ಹೃದಯಸ್ಪರ್ಶಿಯಾಗಿತ್ತು.

ಜನಾರ್ದನ ಹಾವಂಜೆ ಅವರ ಕಾವಿ ಕಲೆಯ ಬಗೆಗಿನ ತೀವ್ರಾಸಕ್ತಿ ಮತ್ತು ನಿಪುಣತೆ ಹಾಗೂ ಅವರ ಭಾವನಾ ಫೌಂಡೇಶನ್ ಮೂಲಕ ಕಲೆಯನ್ನು ಉತ್ತೇಜಿಸುವ ಮತ್ತು ಸಂರಕ್ಷಿಸುವ ದೃಷ್ಟಿಕೋನವು ವೆಂಟನಾ ಫೌಂಡೇಶನ್‍ಗೆ ಸ್ಪೂರ್ತಿದಾಯಕವಾಗಿದೆ. ಈ ಉಪಕ್ರಮದ ಮೂಲಕ, ನಾವು ಕಲೆಯನ್ನು ಬೆಂಬಲಿಸುವ ಉದ್ದೇಶಕ್ಕೆ ಮಾತ್ರವಲ್ಲದೆ ಉಡುಪಿಯ ಸ್ಥಳೀಯ ಕಲಾವಿದರು ಮತ್ತು ಕಲಾಭಿಮಾನಿಗಳ ಬೆಳವಣಿಗೆಗೆ ಸಹಕರಿಸಿದ್ದೇವೆ.

ಭವಿಷ್ಯದಲ್ಲಿ ಇಂತಹ ಉಪಕ್ರಮಗಳನ್ನು ಬೆಂಬಲಿಸಲು ಮುಂದುವರಿಸುವುದನ್ನು ಈ ಕಾರ್ಯಾಗಾರದ ಯಶಸ್ಸು ನಮ್ಮನ್ನು ಪ್ರೋತ್ಸಾಹಿಸಿದೆ. ಸಮಾಜವನ್ನು ರೂಪಿಸಲು ಕಲೆ ಮತ್ತು ಸಂಸ್ಕೃತಿಯು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂಬುದು ವೆಂಟನಾ ಫೌಂಡೇಶನ್‍ನ ನಂಬಿಕೆ ಮತ್ತು ಸಮುದಾಯದಲ್ಲಿ ಕಲೆಗಳ ಬೆಳವಣಿಗೆಯನ್ನು ಉತ್ತೇಜಿಸುವಂತಹ ಉಪಕ್ರಮಗಳಿಗೆ ಬೆಂಬಲ ನೀಡಲು ನಾವು ಬದ್ಧರಾಗಿದ್ದೇವೆ.

ಪಟ್ಟಚಿತ್ರ ಕಾರ್ಯಾಗಾರಕ್ಕಾಗಿ ಫೌಂಡೇಶನ್ ನೀಡಿದ ಆರ್ಥಿಕ ಬೆಂಬಲವು ಉಡುಪಿಯ ಸ್ಠಳೀಯ ಕಲಾವಿದರು ಮತ್ತು ಕಲಾ ಆಸಕ್ತರನ್ನು ಸಬಲೀಕರಣಗೊಳಿಸುವಲ್ಲಿ ಒಂದು ಹೆಜ್ಜೆಯಾಗಿದೆ. ಕಲೆ ಮತ್ತು ಸಂಸ್ಕೃತಿಯ ಬಗೆಗಿನ ನಮ್ಮ ತೀವ್ರಾಸಕ್ತಿಯಂತಿರುವ ಇತರ ಸಂಸ್ಥೆಗಳು ಮತ್ತು ವ್ಯಕ್ತಿಗಳೊಂದಿಗೆ ಸೇರಿ ಕೆಲಸ ಮಾಡುವ ಮೂಲಕ ಈ ಪ್ರದೇಶದಲ್ಲಿ ಮತ್ತು ಇದರಿಂದಾಚೆಗೆ ಕಲೆಗಳ ಬೆಳವಣಿಗೆಯನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ ಎಂದು ನಾವು ಆಶಿಸುತ್ತೇವೆ.