ಶಿಕ್ಷಣ ಸಬಲೀಕರಣ: ವಾರ್ಷಿಕ ಪುಸ್ತಕ ವಿತರಣೆ

Published on 14 May 2024

  • ಶಿಕ್ಷಣ

ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುವ ನಮ್ಮ ಬದ್ಧತೆಗಾಗಿ ಏರ್ಪಡಿಸುವ ವೆಂಟನಾ ಫೌಂಡೇಶನ್‌ನ ವಾರ್ಷಿಕ ಪುಸ್ತಕ ದೇಣಿಗೆ ಅಭಿಯಾನವು, ಉಡುಪಿ ಸುತ್ತಲಿನ ಪ್ರದೇಶದ 16 ಶಾಲೆಗಳಲ್ಲಿ 1,750 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪುವುದರೊಂದಿಗೆ ಈ ವರ್ಷ ಹೊಸ ಮೈಲಿಗಲ್ಲುಗಳನ್ನು ಮುಟ್ಟಿದೆ. ವೆಂಟನಾ ಫೌಂಡೇಶನ್‍ನ ಶೈಕ್ಷಣಿಕ ವಿಸ್ತರಣೆಯ ಅಡಿಪಾಯವಾಗಿ ಮಾರ್ಪಟ್ಟಿರುವ ಈ ಉಪಕ್ರಮವು ಶಿಕ್ಷಣ ವಂಚಿತ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಸಂಪನ್ಮೂಲಗಳನ್ನು ಒದಗಿಸುವ ಪರಿವರ್ತನಕಾರಿ ಸಾಮರ್ಥ್ಯದ ಶ್ರೇಷ್ಟತೆಯೇನೆಂದು ತೋರ್ಪಡಿಸುತ್ತದೆ.

ಸಹಾಯ ಬೇಕೆಂದು ಹೆಚ್ಚಿನ ಸಂಖ್ಯೆಯ ಶಾಲೆಗಳು ಸಂಪರ್ಕಿಸಿದ್ದು, ಈ ಯೋಜನೆ ಎಷ್ಟೊಂದು ಪರಿಣಾಮಕಾರಿ ಎಂದು ಈ ವರ್ಷ ಸ್ಪಷ್ಟವಾಗಿ ತಿಳಿದುಬಂದಿದೆ. ಫೌಂಡೇಶನ್‌ನ ಸಮಗ್ರ ತಲುಪುವಿಕೆಯಿಂದಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಂದ ಪ್ರೌಢಶಾಲೆಗಳವರೆಗೆ ವೈವಿಧ್ಯಮಯ ಶೈಕ್ಷಣಿಕ ಸಂಸ್ಥೆಗಳಿಗೆ ಸಹಾಯವಾಗಿದೆ, ಇದರಿಂದ ಎಲ್ಲಾ ಹಂತಗಳಲ್ಲಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ಅಗತ್ಯ ಅಧ್ಯಯನ ಸಾಮಗ್ರಿಗಳನ್ನು ಪಡೆದುಕೊಂಡಿದ್ದಾರೆ ಎಂಬುದು ಖಚಿತವಾಗಿದೆ.

"ಮಗು ಹೊಸ ಪುಸ್ತಕಗಳನ್ನು ಸ್ವೀಕರಿಸಿದಾಗ, ಅವರ ಕಣ್ಣುಗಳು ಆಶಾಭಾವದಿಂದ ಬೆಳಗುತ್ತವೆ" ಎಂದು ಇಂದಿರಾನಗರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರೊಬ್ಬರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಾರೆ. "ಈ ದೇಣಿಗೆಗಳು ಬರಿ ವಸ್ತುಗಳನ್ನು ಒದಗಿಸುವುದಕ್ಕಿಂತ ಹೆಚ್ಚಿನದನ್ನು ಮಾಡುತ್ತವೆ - ಅವು ವಿದ್ಯಾರ್ಥಿಗಳಿಗೆ ದೊಡ್ಡ ಕನಸು ಕಾಣುವ ವಿಶ್ವಾಸವನ್ನು ನೀಡುತ್ತವೆ." ಭಾಗವಹಿಸುವ ಎಲ್ಲಾ ಶಾಲೆಗಳಲ್ಲಿ ಇದೇ ಭಾವನೆ ವ್ಯಕ್ತವಾಗುತ್ತದೆ, ಅಲ್ಲಿ ಶಿಕ್ಷಕರು ಮತ್ತು ಪೋಷಕರು ಈ ಉಪಕ್ರಮಕ್ಕಾಗಿ ತುಂಬು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

ಈ ವರ್ಷದ ಒಂದು ಹೃದಯಸ್ಪರ್ಶಿ ಬೆಳವಣಿಗೆಯಲ್ಲಿ, ದೊಡ್ಡಣಗುಡ್ಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶಾಲಾ ಬ್ಯಾಗ್‌ಗಳಿಗಾಗಿ ವಿಶೇಷ ವಿನಂತಿಯೊಂದಿಗೆ ಫೌಂಡೇಶನ್‍ನ್ನು ಸಂಪರ್ಕಿಸಿತು. ತಕ್ಷಣವೇ ಸ್ಪಂದಿಸಿದ ವೆಂಟನಾ ಫೌಂಡೇಶನ್, ಅರ್ಹ ವಿದ್ಯಾರ್ಥಿಗಳಿಗೆ 40 ಬ್ಯಾಗ್‌ಗಳನ್ನು ದಾನ ಮಾಡಿದೆ, ಕೇವಲ ಪುಸ್ತಕಗಳಿಗಷ್ಟೇ ತಮ್ಮ ಬೆಂಬಲವನ್ನು ಸೀಮಿತಗೊಳಿಸದೇ ವಿದ್ಯಾರ್ಥಿಗಳು ತಮ್ಮ ಕಲಿಕೆಗೆ ಅಗತ್ಯವಿರುವ ಎಲ್ಲಾ ಸಾಧನಗಳನ್ನು ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡಿದೆ.

ಈ ಕೆಳಗಿನ ಪ್ರದೇಶದಲ್ಲಿರುವ ಶಾಲೆಗಳಿಗೆ ಪುಸ್ತಕಗಳನ್ನು ನೀಡಲಾಯಿತು

  • ಇಂದಿರಾನಗರ ಮತ್ತು ಅಜ್ಜರಕಾಡಿನಂತಹ ನಗರ ಕೇಂದ್ರಗಳು
  • ಮಲ್ಪೆ ಮತ್ತು ಕೆಮ್ಮಣ್ಣಿನಂತಹ ಕರಾವಳಿ ಪ್ರದೇಶಗಳು
  • ಪುತ್ತೂರು ಮತ್ತು ಮಣಿಪುರ ಒಳಗೊಂಡಂತೆ ಗ್ರಾಮೀಣ ಭಾಗಗಳು

ಈ ವ್ಯಾಪಕ ವಿಸ್ತಾರವಾದ ಶೈಕ್ಷಣಿಕ ಬೆಂಬಲವು ವಿವಿಧ ಸಾಮಾಜಿಕ-ಆರ್ಥಿಕ ಹಿನ್ನೆಲೆಯುಳ್ಳ ಮತ್ತು ಸ್ಥಳಗಳಲ್ಲಿನ ವಿದ್ಯಾರ್ಥಿಗಳನ್ನು ತಲುಪುತ್ತದೆ ಎಂದು ಖಚಿತಪಡಿಸುತ್ತದೆ, ಜೊತೆಗೆ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಹೆಚ್ಚು ಸುಲಭವಾಗಿ ದೊರೆಯುವಂತೆ ಮಾಡುತ್ತದೆ.

ಇನ್ನು ಮುಂದೆ ಶೈಕ್ಷಣಿಕ ಸರಬರಾಜುಗಳ ಆರ್ಥಿಕ ಹೊರೆಯ ಬಗ್ಗೆ ವಿದ್ಯಾರ್ಥಿಗಳಿಗೆ ಚಿಂತೆ ಮಾಡುವ ಅಗತ್ಯವಿಲ್ಲದಿರುವ ಕುರಿತು ಹಾಗೂ ವಿದ್ಯಾರ್ಥಿಗಳ ಹಾಜರಾತಿಯಲ್ಲಿನ ಹೆಚ್ಚಳ ಮತ್ತು ಶಿಕ್ಷಣದಲ್ಲಿ ಅವರ ತೊಡಗಿಸಿಕೊಳ್ಳುವಿಕೆಯ ಕುರಿತು ಶಿಕ್ಷಕರು ನೀಡಿದ ವರದಿಯು ಈ ವರ್ಷದ ಕಾರ್ಯಕ್ರಮದ ಯಶಸ್ಸನ್ನು ವಿಶೇಷವಾಗಿ ಹೃದಯಸ್ಪರ್ಶಿಯನ್ನಾಗಿ ಮಾಡಿದೆ. ಈ ಬೆಂಬಲವು ಮಕ್ಕಳ ಶಿಕ್ಷಣವು ಅಡೆತಡೆಯಿಲ್ಲದೆ ಮುಂದುವರಿಯುವುದನ್ನು ಖಚಿತಪಡಿಸಿರುವುದರಿಂದ ಇತರ ಅವಶ್ಯಕ ಬೇಕುಬೇಡಗಳ ಬಗ್ಗೆ ತಮ್ಮ ಸೀಮಿತ ಸಂಪನ್ಮೂಲಗಳನ್ನು ವಿನಿಯೋಗಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಪೋಷಕರು ಅರಿತುಕೊಂಡಿದ್ದಾರೆ.

ಭವಿಷ್ಯದ ಬಗ್ಗೆ ಹೇಳುವುದಾದರೆ, ವೆಂಟನಾ ಫೌಂಡೇಶನ್ ತನ್ನ ಶೈಕ್ಷಣಿಕ ಉಪಕ್ರಮಗಳನ್ನು ವಿಸ್ತರಿಸಲು ಬದ್ಧವಾಗಿದೆ. ಶಾಲೆಗಳಿಂದ ಬರುತ್ತಿರುವ ವಿನಂತಿಗಳ ಸಂಖ್ಯೆಯಲ್ಲಿನ ಹೆಚ್ಚಳವು ಕಾರ್ಯಕ್ರಮದ ಯಶಸ್ಸು ಮತ್ತು ನಮ್ಮ ಸಮುದಾಯದಲ್ಲಿ ಅಂತಹ ಬೆಂಬಲದ ನಿರಂತರ ಅಗತ್ಯತೆಯನ್ನು ಸೂಚಿಸುತ್ತದೆ. ಈ ನಿರಂತರ ಪ್ರಯತ್ನಗಳ ಮೂಲಕ, ಪ್ರತಿ ಮಗುವಿಗೆ ಅದರ ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಗುಣಮಟ್ಟದ ಶಿಕ್ಷಣ ದೊರಕುವಂತೆ ಮಾಡುವ ತಮ್ಮ ಆಶಯವನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಫೌಂಡೇಶನ್ ಕೆಲಸ ಮಾಡುತ್ತಿದೆ.

ಒಬ್ಬ ಪೋಷಕರು ಹೇಳಿದಂತೆ, "ಶಿಕ್ಷಣವು ನಾವು ನಮ್ಮ ಮಕ್ಕಳಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆಯಾಗಿದೆ ಮತ್ತು ವೆಂಟನಾ ಫೌಂಡೇಶನ್ ನಮ್ಮಂತಹ ಅನೇಕ ಕುಟುಂಬಗಳಿಗೆ ಈ ಉಡುಗೊರೆಯನ್ನು ಪಡೆಯಲು ಸಹಾಯ ಮಾಡುತ್ತಿದೆ."