ಕುಂದಾಪುರದ ಸರ್ಕಾರಿ ಶಾಲೆಗೆ ಮೂಲಸೌಕರ್ಯಗಳ ಕೊಡುಗೆ
Published on 30 Dec 2022
- ಶಿಕ್ಷಣ
ವೆಂಟನಾ ಫೌಂಡೇಶನ್ ಜೂನ್ 2022 ರಲ್ಲಿ, ಕುಂದಾಪುರದ ಬಿದ್ಕಲಕಟ್ಟೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಿಂದ ವಿನಂತಿಯನ್ನು ಪಡೆದುಕೊಂಡಿತು. ಶಾಲೆಯು ವಿದ್ಯಾರ್ಥಿಗಳ ದಾಖಾಲಾತಿಯಲ್ಲಿ ಹೆಚ್ಚಳವನ್ನು ಕಂಡುಕೊಂಡಿದೆ ಮತ್ತು ಇದರ ಪರಿಣಾಮವಾಗಿ, ಡೆಸ್ಕ್‌ಗಳು, ಬೆಂಚುಗಳು ಮತ್ತು ಪ್ರಿಂಟರ್‌ಗಳಂತಹ ಅತ್ಯವಶ್ಯಕ ಪರಿಕರಗಳ ಕೊರತೆಯು ಕಂಡುಬಂತು. ಶಿಕ್ಷಣವನ್ನು ಪ್ರಮುಖ ಗುರಿಯನ್ನಾಗಿ ಮಾಡಿಕೊಂಡಿರುವ ವೆಂಟನಾ ಫೌಂಡೇಶನ್ ತಕ್ಷಣ ಕ್ರಮ ಕೈಗೊಂಡಿತು ಮತ್ತು ಪರಿಶೀಲನೆಗಾಗಿ ತನ್ನ ತಂಡವನ್ನು ಶಾಲೆಗೆ ಕಳುಹಿಸಿತು.
ತನ್ನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಶಾಲೆಯ ಪ್ರಯತ್ನಗಳು ಮತ್ತು ದಕ್ಷತೆಯಿಂದ ವೆಂಟನಾ ಫೌಂಡೇಶನ್ ತಂಡ ಪ್ರಭಾವಿತವಾಯಿತು. ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಅತ್ಯುತ್ಸುಕರಾಗಿದ್ದು, ವಿದ್ಯಾರ್ಥಿಗಳು ಶಿಸ್ತುಬದ್ಧರಾಗಿದ್ದರು ಮತ್ತು ಸಾಕಷ್ಟು ಸಂವಹನ ಆಧಾರಿತ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ರೋಬೋಸಾಫ್ಟ್ ಟೆಕ್ನಾಲಜೀಸ್‌ನ ಸಿಎಸ್‌ಆರ್ ಉಪಕ್ರಮಗಳ ಭಾಗವಾಗಿ ಶಾಲೆಗೆ ಈ ಹಿಂದೆ ದಾನ ಮಾಡಿದ ಕಂಪ್ಯೂಟರ್‌ಗಳು ಶಾಲೆಯಲ್ಲಿದ್ದು ಅದಕ್ಕೆ 'ರೋಬೋಸಾಫ್ಟ್ ಕಂಪ್ಯೂಟರ್ ಲ್ಯಾಬ್' ಎಂದು ಹೆಸರಿಸಿರುವುದನ್ನು ಕಂಡು ತಂಡಕ್ಕೆ ಆಶ್ಚರ್ಯವಾಯಿತು.
ಶಾಲೆಯನ್ನು ಪರಿಶೀಲಿಸಿದ ನಂತರ, ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗಲೆಂದು ಅಗತ್ಯವಿರುವಂತಹ ಅಂದಾಜು 50 ಡೆಸ್ಕ್‌ಗಳು, ಬೆಂಚುಗಳು ಮತ್ತು ಪ್ರಿಂಟರ್‌ಗೆ ವೆಂಟನಾ ಫೌಂಡೇಶನ್ ಅನುಮೋದನೆ ನೀಡಿತು. ಕೆಲಸದ ಆದೇಶವನ್ನು ಸ್ಥಳೀಯ ಬಡಗಿಗೆ ನೀಡಲಾಯಿತು, ಎರಡು ತಿಂಗಳ ನಂತರ, ಪೀಠೋಪಕರಣಗಳನ್ನು ಶಾಲೆಗೆ ರವಾನಿಸಲು ಸಿದ್ಧವಾಯಿತು. ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಲು ಶಾಲೆಗೆ ಪ್ರಿಂಟರ್ ಕೂಡ ನೀಡಲಾಯಿತು.
ಡಿಸೆಂಬರ್ 30, 2022 ರಂದು ನಡೆದ ಹಸ್ತಾಂತರ ಸಮಾರಂಭದಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆಯವರ ಉಪಸ್ಥಿತಿ ಮೆರುಗು ನೀಡಿತು ಮತ್ತು ರೋಹಿತ್ ಭಟ್ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸುಂದರ ನೃತ್ಯ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಕುಂದಾಪುರದ ಕರ್ನಾಟಕ ಪಬ್ಲಿಕ್ ಶಾಲೆಗೆ ಈ ಕೊಡುಗೆಯು ಗ್ರಾಮೀಣ ಶಿಕ್ಷಣವನ್ನು ಪ್ರೋತ್ಸಾಹಿಸುವ ಮತ್ತು ಗ್ರಾಮೀಣ ಶಾಲೆಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಸಲುವಾಗಿ ವೆಂಟನಾ ಫೌಂಡೇಶನ್ ಕೈಗೆತ್ತಿಕೊಂಡಿರುವ ಅನೇಕ ಉಪಕ್ರಮಗಳಲ್ಲಿ ಒಂದಾಗಿದೆ. ತರಗತಿಯಲ್ಲಿನ ಆಸನ ವ್ಯವಸ್ಥೆಗಳು, ಮೇಜುಗಳು ಮತ್ತು ಬೆಂಚುಗಳು ವಿದ್ಯಾರ್ಥಿಗಳ ಕಲಿಕೆಯಲ್ಲಿ ಪರಿಣಾಮಕಾರಿ ಪಾತ್ರವನ್ನು ವಹಿಸುವುದನ್ನು ವೆಂಟನಾ ಫೌಂಡೇಶನ್ ಕಂಡುಕೊಂಡಿದೆ.
ಶಾಲೆಯ ಸಾಮರ್ಥ್ಯವು ಪ್ರತೀ ವರ್ಷ ಹೆಚ್ಚಾಗುತ್ತಿದ್ದು , ಪ್ರಸ್ತುತ 546 ಮಕ್ಕಳಿದ್ದಾರೆ. ವೆಂಟನಾ ಫೌಂಡೇಶನ್‌ನ ಬೆಂಬಲದಿಂದ, ಶಾಲೆಯು ಗುಣಮಟ್ಟದ ಶಿಕ್ಷಣವನ್ನು ನೀಡುವುದನ್ನು ಮತ್ತು ಅದರ ವಿದ್ಯಾರ್ಥಿಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸಿದೆ. ಶಿಕ್ಷಣವನ್ನು ಪ್ರೋತ್ಸಾಹಿಸುವ ಮತ್ತು ಗ್ರಾಮೀಣ ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ತರುವ ಪ್ರಯತ್ನವು ವೆಂಟನಾ ಫೌಂಡೇಶನ್‌ನ ಬದ್ಧತೆಗೆ ಸಾಕ್ಷಿಯಾಗಿದೆ.