ಮಲ್ಪೆ ಶಾಲೆಯ ನವೀಕರಣ ಯೋಜನೆ
Published on 10 Jan 2023
- ಶಿಕ್ಷಣ
ವೆಂಟನಾ ಫೌಂಡೇಶನ್ ಗ್ರಾಮೀಣ ಶಿಕ್ಷಣವನ್ನು ಪ್ರೋತ್ಸಾಹಿಸಲು ಬಲವಾಗಿ ಪ್ರಯತ್ನಿಸುತ್ತಿದೆ ಮತ್ತು ಇತ್ತೀಚೆಗೆ ಉಡುಪಿಯ ಮಲ್ಪೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ನವೀಕರಿಸುವ ಸವಾಲನ್ನು ಕೈಗೆತ್ತಿಕೊಂಡಿದೆ. ಇಲ್ಲಿನ ಸ್ಥಳೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಸುದೀರ್ಘ ಇತಿಹಾಸವನ್ನು ಹೊಂದಿರುವ ಈ ಶಾಲೆಯು ಅದರ ಶಿಥಿಲಗೊಂಡಂತಹ ಕಟ್ಟಡ ಮತ್ತು ಮೂಲ ಸೌಕರ್ಯಗಳ ಅವ್ಯವಸ್ಥೆಯಿಂದ ತೊಂದರೆಯನ್ನು ಅನುಭವಿಸುತ್ತಿದೆ. ಗುಣಮಟ್ಟದ ಶಿಕ್ಷಣದ ಸಲುವಾಗಿ ಸುರಕ್ಷಿತ ಮತ್ತು ಸಮರ್ಪಿತ ವಾತಾವರಣವನ್ನು ಒದಗಿಸುವ ಪ್ರಾಮುಖ್ಯತೆಯನ್ನು ಮನಗಂಡ ರೋಹಿತ್ ಭಟ್ ಮತ್ತು ರವೀಂದ್ರ ಕೆ ನೇತೃತ್ವದ ವೆಂಟನಾ ಫೌಂಡೇಶನ್ ತಂಡವು, ಮುದುಡದ ಉತ್ಸಾಹದೊಂದಿಗೆ ಕಟ್ಟಡವನ್ನು ನವೀಕರಿಸುವ ಅತಿ ದೊಡ್ಡ ಕಾರ್ಯವನ್ನು ಕೈಗೊಂಡಿತು.
ಅಕ್ಟೋಬರ್ 2022 ರ ಮಧ್ಯದಲ್ಲಿ ಪ್ರಾರಂಭವಾದ ನವೀಕರಣ ಯೋಜನೆಯಲ್ಲಿ ಸವಾಲುಗಳು ಇಲ್ಲದೆ ಇರಲಿಲ್ಲ. ಕಟ್ಟಡವನ್ನು ನವೀಕರಿಸುವ ಉದ್ದೇಶ ಶಾಲೆಗಿದ್ದರೂ, ಅವರ ಕಡೆಯಿಂದ ಆದ ಪ್ರಯತ್ನಗಳು ತೃಪ್ತಿಕರವಾಗಿರಲಿಲ್ಲ. ಶಾಲೆ ಮತ್ತು ಅದರ ವೆಂಡರ್ ಗಳಿಂದ ಒದಗಿಸಲಾದ ಬೆಂಬಲವು ಸೀಮಿತವಾಗಿತ್ತು, ಇದರಿಂದ ವೆಂಟನಾ ಫೌಂಡೇಶನ್ ತಂಡಕ್ಕೆ ಬಹಳಷ್ಟು ವಿಳಂಬವಾಯಿತು ಮತ್ತು ಯೋಜನೆಯನ್ನು ಪುನಃ ಬದಲಿಸಬೇಕಾಯಿತು.
ಆದಾಗ್ಯೂ, ವೆಂಟನಾ ಫೌಂಡೇಶನ್ ತಂಡವು ಪಟ್ಟುಹಿಡಿದಿತ್ತು, ಗ್ರಾಮೀಣ ಶಿಕ್ಷಣವನ್ನು ಪ್ರೋತ್ಸಾಹಿಸುವ ಮತ್ತು ಗ್ರಾಮೀಣ ಶಾಲೆಗಳನ್ನು ಅಭಿವೃದ್ಧಿಪಡಿಸುವ ತಮ್ಮ ಬದ್ಧತೆಯಿಂದ ಇಂಚು ಕೂಡ ಅಲುಗಾಡಲಿಲ್ಲ. ತಮ್ಮ ಅವಿರತ ಸಮರ್ಪಣಾ ಭಾವದಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲವಾಗಲೆಂದು 2023ರ ಜನವರಿ ಆರಂಭದಲ್ಲಿ ಶೌಚಾಲಯ ಹಾಗೂ ಉದ್ಯಾನವನದ ನಿರ್ಮಾಣದ ಜೊತೆಗೆ ನವೀಕರಣ ಯೋಜನೆಯನ್ನು ಪೂರ್ಣಗೊಳಿಸಿದರು. ನೂತನವಾಗಿ ನವೀಕರಿಸಿದ ಶಾಲಾ ಕಟ್ಟಡವನ್ನು ಉಡುಪಿಯ ಶಾಸಕರಾದ ರಘುಪತಿ ಭಟ್ ಅವರು ಜನವರಿ 10, 2023ರಂದು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಭಟ್ ಅವರು, ಅಳಿವಿನಂಚಿನಲ್ಲಿದ್ದ ಶಾಲಾ ಕಟ್ಟಡವನ್ನು ನವೀಕರಿಸುವಲ್ಲಿ ವೆಂಟನಾ ಫೌಂಡೇಶನ್‌ನ ಪ್ರಯತ್ನ ಮತ್ತು ದಕ್ಷ ಕಾರ್ಯವನ್ನು ಹೊಗಳಿದರು ಮತ್ತು ವೆಂಟನಾ ಫೌಂಡೇಶನ್ ತನ್ನ ಮುಂದಿನ ಪ್ರಯತ್ನಗಳಲ್ಲಿ ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರದೇಶದ ಹಲವು ಗಣ್ಯವ್ಯಕ್ತಿಗಳು ಸಹ ಉಪಸ್ಥಿತರಿದ್ದರು.
ನವೀಕರಣ ಯೋಜನೆಯ ಸಂದರ್ಭ ಎದುರಿಸಿದ ಸವಾಲುಗಳ ನಡುವೆಯೂ, ವೆಂಟನಾ ಫೌಂಡೇಶನ್ ತಂಡವು ತನ್ನ ಧ್ಯೇಯೋದ್ದೇಶದ ಕಡೆಗೆ ಗಮನ ಕೇಂದ್ರೀಕರಿಸಿತ್ತು ಮತ್ತು ಸೇವೆಯನ್ನು ಮುಡಿಪಾಗಿಟ್ಟಿತು. ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಮತ್ತು ಉನ್ನತ ಗುಣಮಟ್ಟಕ್ಕೆ ಅನುಗುಣವಾಗಿ ಪೂರ್ಣಗೊಳಿಸಲು ಅವರು ದಣಿವರಿಯದೆ ಕೆಲಸ ಮಾಡಿದರು. ಅವರ ಕೆಲಸದಿಂದ ಮಲ್ಪೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ ಪ್ರಯೋಜನವಾಗಿಲ್ಲ, ಜೊತೆಗೆ ಈ ಪ್ರದೇಶದಲ್ಲಿನ ಇತರ ಗ್ರಾಮೀಣ ಶಾಲೆಗಳಿಗೆ ಇದು ಮಾದರಿಯಾಯಿತು.
ಮಲ್ಪೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನವೀಕರಣ ಕಾರ್ಯವು ಗ್ರಾಮೀಣ ಶಿಕ್ಷಣವನ್ನು ಪ್ರೋತ್ಸಾಹಿಸುವ ಮತ್ತು ಗ್ರಾಮೀಣ ಶಾಲೆಗಳ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವ ವೆಂಟನಾ ಫೌಂಡೇಶನ್‌ನ ಅವಿರತ ಸಮರ್ಪಣೆಗೆ ಸಾಕ್ಷಿಯಾಗಿದೆ. ಉಡುಪಿಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅವರಿಗೆ ಅರ್ಹವಾದಂತಹ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಶಿಕ್ಷಣಕ್ಕೆ ಸುರಕ್ಷಿತ ಮತ್ತು ಸಮರ್ಪಕ ವಾತಾವರಣವನ್ನು ಸೃಷ್ಟಿಸಲು ಫೌಂಡೇಶನ್‌ನ ಕೆಲಸಗಳು ಸಹಾಯ ಮಾಡಿದೆ