ಅಚ್ಚಡದ ಸರಕಾರಿ ಶಾಲೆಗೆ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ಗಳ ಕೊಡುಗೆ

Published on 14 Jan 2023

  • ಶಿಕ್ಷಣ

ತಂತ್ರಜ್ಞಾನವು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಮತ್ತು ಅತ್ಯವಶ್ಯಕವಾಗಿರುವ ಪ್ರಪಂಚದಲ್ಲಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಂಪ್ಯೂಟರ್ ಶಿಕ್ಷಣ ದೊರಕುವುದು ಬಹಳ ಮುಖ್ಯ. ದುರದೃಷ್ಟವಶಾತ್, ಭಾರತದಲ್ಲಿ ಅನೇಕ ಗ್ರಾಮೀಣ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು ಒದಗಿಸಲು ಅಗತ್ಯ ಸಂಪನ್ಮೂಲಗಳನ್ನು ಹೊಂದಿಲ್ಲ. ಈ ಕಾರಣದಿಂದಾಗಿಯೇ ಲಾಭರಹಿತ ಸಂಸ್ಠೆಯಾದ ವೆಂಟಾನಾ ಫೌಂಡೇಶನ್ ಉಡುಪಿಯ ಅಚ್ಚಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎರಡು ಕಂಪ್ಯೂಟರ್ ಸಿಸ್ಟಮ್ ಅನ್ನು ಕೊಡುಗೆಯಾಗಿ ನೀಡಲು ನಿರ್ಧರಿಸಿತು.

ಫೌಂಡೇಶನ್ ಆಗಸ್ಟ್ 2022 ರಲ್ಲಿ ಕಂಪ್ಯೂಟರ್ ಸಿಸ್ಟಮ್‍ಗಳ ಕೋರಿಕೆಯನ್ನು ಸ್ವೀಕರಿಸಿತು. ಪ್ರಸ್ತುತ 108 ಮಕ್ಕಳನ್ನು ಹೊಂದಿರುವ ಶಾಲೆಯಲ್ಲಿ 4 ರಿಂದ 8ನೇ ತರಗತಿಗೆ ಕಂಪ್ಯೂಟರ್ ಶಿಕ್ಷಣವನ್ನು ನೀಡಲು ಕಂಪ್ಯೂಟರ್‌ಗಳ ಅಗತ್ಯವಿತ್ತು. ವೆಂಟನಾ ಫೌಂಡೇಶನ್‍ನ ಸದಸ್ಯರಲ್ಲಿ ಒಬ್ಬರಾದ ಸುಧೀಂದ್ರ ಅವರು ಇದೇ ಶಾಲೆಯ ಹಳೆಯ ವಿಧ್ಯಾರ್ಥಿಯಾಗಿದ್ದರು ಮತ್ತು ಈ ಕೊಡುಗೆಯನ್ನು ನೀಡುವುದರಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು.

 

ವೆಂಟನಾ ಫೌಂಡೇಶನ್ ಈಗಿನ ಜಗತ್ತಿನಲ್ಲಿ ಕಂಪ್ಯೂಟರ್ ಶಿಕ್ಷಣದ ಪ್ರಾಮುಖ್ಯತೆಯನ್ನು ತಿಳಿದುಕೊಂಡಿರುವುದರಿಂದ, ಕೋರಿಕೆಗೆ ತ್ವರಿತವಾಗಿ ಸ್ಪಂದಿಸಿತು. ಜನವರಿ 2023 ರಲ್ಲಿ ಹಸ್ತಾಂತರ ಕಾರ್ಯಕ್ರಮ ಆಯೋಜಿಸಲಾಗಿತ್ತು, ಇದರಲ್ಲಿ ರವೀಂದ್ರ ಕೆ, ಶೈಲಜಾ ರಾವ್ ಮತ್ತು ಸುಧೀಂದ್ರ ಅವರು ಉಪಸ್ತಿತರಿದ್ದರು. ಸುಧೀಂದ್ರ ಅವರು ತಮ್ಮ ಹೃದಯಸ್ಪರ್ಶಿ ಭಾಷಣದಲ್ಲಿ ವೆಂಟನಾ ಫೌಂಡೇಶನ್‍ನ ಉದಾರ ಕೊಡುಗೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಶಾಲೆಯು ತನ್ನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣವನ್ನು ನೀಡಲು ಸಾಧ್ಯಗೊಳಿಸಿದ್ದಕ್ಕಾಗಿ ಶಾಲಾ ಸಿಬ್ಬಂದಿಯೂ ಸಹ ಉತ್ಸಾಹದಿಂದ ಸುಧೀಂದ್ರರವರಿಗೆ ಹಾಗೂ ಫೌಂಡೇಶನ್‍ನ ಕೊಡುಗೆಗೆ ಧನ್ಯವಾದ ಸಲ್ಲಿಸಿದರು. ಕಂಪ್ಯೂಟರ್ ಸಿಸ್ಟಮ್‌ಗಳ ಕೊಡುಗೆಯು ಅಚ್ಚಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಜೀವನದ ಮೇಲೆ ಮಹತ್ವಪೂರ್ಣ ಪರಿಣಾಮವನ್ನು ಬೀರುತ್ತದೆ, ಅವರಿಗೆ ಆಧುನಿಕ ತಂತ್ರಜ್ಞಾನದ ತಿಳುವಳಿಕೆಯನ್ನು ನೀಡುವುದರ ಜೊತೆಗೆ ಅದರ ಮೇಲೆ ಹೆಚ್ಚು ಅವಲಂಬಿತವಾಗುತ್ತಿರುವ ಭವಿಷ್ಯಕ್ಕಾಗಿ ಅವರನ್ನು ಸಿದ್ಧಪಡಿಸುತ್ತದೆ.

ವೆಂಟನಾ ಫೌಂಡೇಶನ್ ಗ್ರಾಮೀಣ ಶಿಕ್ಷಣವನ್ನು ಪ್ರೋತ್ಸಾಹಿಸಲು ಮತ್ತು ವಿದ್ಯಾರ್ಥಿಗಳು ಯಶಸ್ವಿಯಾಗಲು ಅಗತ್ಯವಿರುವ ಸಾಧನಗಳಿಂದ ಸಬಲೀಕರಣಗೊಳಿಸಲು ಬದ್ಧವಾಗಿದೆ. ಅಚ್ಚಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಿದ ಕೊಡುಗೆಯು ಡಿಜಿಟಲ್ ತಾರತಮ್ಯವನ್ನು ಕಡಿಮೆ ಮಾಡಲು ವೆಂಟನಾ ಫೌಂಡೇಶನ್‍ನ ಪ್ರಯತ್ನಗಳು ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ವಿದ್ಯಾರ್ಥಿಗಳಂತೆಯೆ ಅವಕಾಶಗಳನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದರ ಒಂದು ಉದಾಹರಣೆಯಾಗಿದೆ.

ಅಚ್ಚಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಸಿಸ್ಟಮ್‌ಗಳನ್ನು ಕೊಡುಗೆಯಾಗಿ ನೀಡುವ ವೆಂಟನಾ ಫೌಂಡೇಶನ್‌ನ ಉಪಕ್ರಮವು ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂದಿನ ಜಗತ್ತಿನಲ್ಲಿ ಯಶಸ್ವಿಯಾಗಲು ಅಗತ್ಯವಾದ ಸಾಧನಗಳೊಂದಿಗೆ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ.