ಶತಮಾನದಷ್ಟು ಹಳೆಯ ಶಾಲೆಗೆ ಕೊಡುಗೆ
Published on 22 Feb 2023
- ಶಿಕ್ಷಣ
ಸುಧೀರ್ ಅವರು ಉಡುಪಿಯ ನಂದಿಕೂರಿನಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ವಿನಂತಿ ಪತ್ರವನ್ನು ಸ್ವೀಕರಿಸಿದ ಸಮಯವು ಒಂದು ನೀರಸವಾದ ಮಧ್ಯಾಹ್ನದ ಸಮಯವಾಗಿತ್ತು. 169 ಮಕ್ಕಳನ್ನು ಹೊಂದಿರುವ ಈ ಶಾಲೆಯಲ್ಲಿ, ಮಧ್ಯಾಹ್ನದ ಉಚಿತ ಊಟವನ್ನು ಆರಂಭಿಸಲು, ಶಾಲೆಯಲ್ಲಿ ಅಡುಗೆಯನ್ನು ತಯಾರಿಸುವುದಕ್ಕಾಗಿ ಅಗತ್ಯವಿರುವ ಆಡುಗೆ ಪಾತ್ರೆಗಳು, ಮಿಕ್ಸರ್ ಗ್ರೈಂಡರ್, ವಾಟರ್ ಪ್ಯೂರಿಫೈಯರ್ (ನೀರು ಶುದ್ಧೀಕರಣ ಯಂತ್ರ) ಮತ್ತು ಕೆಲವು ಸ್ಟೀಲ್ ಬಕೆಟ್‌ಗಳ ಅವಶ್ಯಕತೆಯಿದೆ ಎಂದು ಆ ಪತ್ರದಲ್ಲಿ ತಿಳಿಸಲಾಗಿತ್ತು. ಇದೊಂದು ಕೂಡಲೇ ಗಮನವಹಿಸುವ ಅತ್ಯಗತ್ಯವಾದ ತುರ್ತು ಅವಶ್ಯಕತೆಯಾಗಿತ್ತು.
ವೆಂಟನಾ ಫೌಂಡೇಶನ್ ಗ್ರಾಮೀಣ ಶಿಕ್ಷಣವನ್ನು ಉತ್ತೇಜಿಸಲು ಮತ್ತು ಗ್ರಾಮೀಣ ಶಾಲೆಗಳ ಬೆಳವಣಿಗೆಯನ್ನು ಉತ್ತೇಜಿಸಲು ಯಾವಾಗಲೂ ಹೆಚ್ಚಿನ ಆಸಕ್ತಿಯನ್ನು ಹೊಂದಿದೆ. ಈ ಗುರಿಯನ್ನು ಸಾಧಿಸುವಲ್ಲಿ ಪ್ರಮುಖವಾದ ಸವಾಲೆಂದರೆ ಶಾಲೆಯಲ್ಲಿರುವಂತಹ ಮೂಲಭೂತ ಸೌಕರ್ಯಗಳ ಕೊರತೆ. ಹಾಗಾಗಿ, ಈ ಪ್ರಾಥಮಿಕ ಉದ್ದೇಶದಂತೆ, ಫೌಂಡೇಶನ್ ನಂದಿಕೂರ್ ಶಾಲೆಗೆ ಅತ್ಯಗತ್ಯವಾದ ಅಡುಗೆ ಪಾತ್ರೆಗಳು ಮತ್ತು ವಾಟರ್ ಪ್ಯೂರಿಫೈಯರ್ ಅನ್ನು ನೀಡಲು ತೀರ್ಮಾನಿಸಿತು.
ಈ ಶಾಲೆಯು ಕೆಲವು ವರ್ಷಗಳ ಹಿಂದೆ ಬಹುತೇಕ ಮುಚ್ಚುವ ಹಂತದಲ್ಲಿತ್ತು. ಇದೊಂದು ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯನ್ನು ಹೊಂದಿದ್ದ ಶತಮಾನದಷ್ಟು ಹಳೆಯದಾದ ಶಾಲೆಯಾಗಿದೆ. ಈ ಶಾಲೆಯಲ್ಲಿನ ಹಳೆಯ ವಿದ್ಯಾರ್ಥಿಗಳೆಲ್ಲಾ ಸೇರಿ ಒಂದು ಟ್ರಸ್ಟ್ ಅನ್ನು ರಚಿಸಿ, ಆ ಮೂಲಕ ಹಳೆಯ ವಿದ್ಯಾರ್ಥಿಗಳು ದೇಣಿಗೆ ನೀಡಿದಂತಹ ಜಾಗದಲ್ಲಿ ಹೊಸ ಶಾಲಾ ಕಟ್ಟಡವನ್ನು ನಿರ್ಮಿಸಲು ಸಹಾಯ ಮಾಡಿದರು.
ಈ ಮೈಲಿಗಲ್ಲನ್ನು ತಲುಪುವುದಕ್ಕಾಗಿ ಮತ್ತು ಸಾಧಿಸುವುದಕ್ಕಾಗಿ ಅನೇಕ ಹಳೆ ವಿದ್ಯಾರ್ಥಿಗಳು ಮಹತ್ತರ ಶ್ರಮವಹಿಸಿದ್ದರು. ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಮುಂಬೈನಲ್ಲಿ ವಾಸವಾಗಿದ್ದಾರೆ ಮತ್ತು ಒಳ್ಳೆಯ ಕಾರ್ಯಕ್ಕಾಗಿ ಉದಾರವಾಗಿ ಬೆಂಬಲ ನೀಡಿದ್ದಾರೆ. ಪುನರ್ನಿರ್ಮಾಣ ಮತ್ತು ಉತ್ತಮ ಮೂಲಸೌಕರ್ಯದೊಂದಿಗೆ, ಒಂದು ಒಳ್ಳೆಯ ಉದ್ದೇಶಕ್ಕಾಗಿ ಸಮಾನ ಮನಸ್ಕ ಜನರ ಪ್ರಯತ್ನದಿಂದ ವಿಷಯಗಳನ್ನು ಹೇಗೆ ರೂಪಿಸಬಹುದು ಎಂಬುದಕ್ಕೆ ಈ ಶಾಲೆಯು ಒಂದು ಅತ್ಯುತ್ತಮವಾದ ಉದಾಹರಣೆಯಾಗಿದೆ.
ಜನವರಿ 2023 ರಲ್ಲಿ ಸುಧೀರ್ ಮತ್ತು ರವೀಂದ್ರ ಕೆ ಅವರು ಶಾಲೆಗೆ ತೆರಳಿ ಪರಿಶೀಲಿಸಿದಾಗ, ಅವರು ಆಶ್ಚರ್ಯಗೊಂಡರು, ಯಾಕೆಂದರೆ ಶಾಲೆಯನ್ನು ಅತ್ಯುತ್ತಮವಾಗಿ ಉಳಿಸಿಕೊಂಡು ಬರಲಾಗಿತ್ತು ಮತ್ತು 169 ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೊಂದಿತ್ತು. ಶಾಲೆಯು ಅತ್ಯುತ್ತಮವಾಗಿ ಬೆಳವಣಿಗೆ ಹೊಂದಲು, ಅವರು ಆಂಗ್ಲ-ಮಾಧ್ಯಮವನ್ನು ಆರಂಭಿಸಬೇಕಾಗಿತ್ತು, ಆದರೆ ಕನ್ನಡ ಮಾಧ್ಯಮದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದರು. ಶಾಲೆಯು ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಚಿತ ಊಟವನ್ನು ಒದಗಿಸಿದೆ, ಅಂದರೆ ಶಾಲೆಯಲ್ಲಿಯೇ ತಯಾರಿಸಿದ ತಾಜಾ ಆಹಾರ. ಆದರೆ ಅದಕ್ಕಾಗಿ ಸಾಕಷ್ಟು ಅಡುಗೆ ಪಾತ್ರೆಗಳು ಮತ್ತು ವಾಟರ್ ಪ್ಯೂರಿಫೈಯರ್‌ನ ಕೊರತೆಯು ಒಂದು ಪ್ರಮುಖ ಸಮಸ್ಯೆಯಾಗಿತ್ತು.
ಈ ಪರಿಶೀಲನೆಯ ನಂತರ, ವೆಂಟನಾ ಫೌಂಡೇಶನ್ ತಂಡವು ತಕ್ಷಣ ಕ್ರಮಕೈಗೊಳ್ಳಲು ತೀರ್ಮಾನಿಸಿತು. ಅದಕ್ಕಾಗಿ ಅವರು ಕಲ್ಕೂರ ರೆಫ್ರಿಜರೇಟರ್‌ಗಳೊಂದಿಗೆ ಶಾಲೆಗೆ ವಾಟರ್ ಪ್ಯೂರಿಫೈಯರ್ ಮತ್ತು ಅಡುಗೆ ಪಾತ್ರೆಗಳಿಗೆ ಆರ್ಡರ್ ಮಾಡಿದರು. ಮಾರಾಟಗಾರರು ಕೇವಲ 15 ದಿನಗಳಲ್ಲಿ ಆರ್ಡರ್ ಅನ್ನು ಪೂರೈಸಿದರು ಮತ್ತು ಇವುಗಳನ್ನು ಫೆಬ್ರವರಿ 2023 ರ ಮೊದಲ ವಾರದಲ್ಲಿ ಶಾಲೆಗೆ ವಿತರಿಸಲಾಯಿತು.
ಅಂತಿಮವಾಗಿ ದೇಣಿಗೆ ಕಾರ್ಯಕ್ರಮದ ದಿನ ಬಂದಿತ್ತು. ವೆಂಟನಾ ಫೌಂಡೇಶನ್‌ನ ಪ್ರತಿನಿಧಿಗಳಾಗಿ ಅನೀಶ್ ಆಚಾರ್ ಮತ್ತು ರವೀಂದ್ರ ಕೆ. ಹಾಜರಿದ್ದರು. ಶಾಲೆಯ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ವಿದ್ಯಾರ್ಥಿಗಳಲ್ಲಿ ಉತ್ಸಾಹವು ಮುಗಿಲು ಮುಟ್ಟಿತ್ತು. ಯಾಕೆಂದರೆ ಅವರಿಗದೊಂದು ಸಂಭ್ರಮದ ಮತ್ತು ಖುಶಿಯ ಸಂದರ್ಭವಾಗಿತ್ತು!
ಕಾರ್ಯಕ್ರಮದಲ್ಲಿ ಹಾಜರಿದ್ದವರಿಗೆ, ಅನೀಶ್ ಅವರು ವೇದಿಕೆಯ ಮೂಲಕ ವೆಂಟನಾ ಫೌಂಡೇಶನ್‌ನ ಪ್ರಾಥಮಿಕ ಉದ್ದೇಶ ಮತ್ತು ಧ್ಯೇಯೋದ್ದೇಶಗಳು ಅಂದರೆ, ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣವನ್ನು ಉತ್ತೇಜಿಸುವುದು, ಪ್ರಕೃತಿಯನ್ನು ಸಂರಕ್ಷಿಸುವುದು ಮತ್ತು ಪ್ರಾಚೀನ ಕಲಾ ಪ್ರಕಾರಗಳು ಮತ್ತು ಕಲಾವಿದರನ್ನು ಬೆಂಬಲಿಸುವ ಮತ್ತು ಪ್ರೋತ್ಸಾಹಿಸುವ ಮೂಲಕ ಸಂಸ್ಕೃತಿಯ ರಕ್ಷಣೆ ಇವುಗಳ ಕುರಿತು ತಿಳಿಸಿದರು.
ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಕೃತಜ್ಞತೆಯೊಂದಿಗೆ ಭಾವಪರವಶರಾದರು. ವೆಂಟನಾ ಫೌಂಡೇಶನ್‍ನಿಂದ ತಮ್ಮ ಶಾಲೆಯು ಈ ಮಟ್ಟಿನಲ್ಲಿ ದೇಣಿಗೆಯನ್ನು ಸ್ವೀಕರಿಸುತ್ತದೆ ಎಂದು ಅವರಿಗೆ ನಂಬಲು ಸಾಧ್ಯವಾಗಿರಲಿಲ್ಲ. ಅಡುಗೆ ಪಾತ್ರೆಗಳು ಮತ್ತು ಇತರೆ ಸಾಮಗ್ರಿಗಳನ್ನು ಶಾಲೆಗೆ ಹಸ್ತಾಂತರಿಸಲಾಯಿತು. ಮತ್ತು ವೆಂಟನಾ ಫೌಂಡೇಶನ್ ತಂಡದಿಂದ ಮಕ್ಕಳಿಗೆ ಸಿಹಿತಿಂಡಿ ವಿತರಿಸುವ ಮೂಲಕ ಕಾರ್ಯಕ್ರಮವು ಕೊನೆಗೊಂಡಿತು. ಸಿಹಿ ತಿಂಡಿಯನ್ನು ಶಾಲೆಯ ಅಡುಗೆಮನೆಯಲ್ಲಿಯೇ ತಯಾರಿಸಲಾಗಿತ್ತು, ಈಗ ಇದು ಮಧ್ಯಾಹ್ನದ ಊಟವನ್ನು ತಯಾರಿಸಲು ಸುಸಜ್ಜಿತವಾಗಿದೆ.
ಸುಧೀರ್ ದಿನದ ಕಾರ್ಯಕ್ರಮದ ಬಗ್ಗೆ ಮೆಲುಕುಹಾಕಿ ಸಂತೃಪ್ತಿಯ ನಗೆ ಚೆಲ್ಲಿದರು. ವೆಂಟನಾ ಫೌಂಡೇಶನ್‌ನ ಈ ಕೊಡುಗೆಯು ನಂದಿಕೂರು ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಜೀವನದಲ್ಲಿ ನೈಜ ಬದಲಾವಣೆಯನ್ನು ತಂದಿದೆ.