ನಮ್ಮ ಯೋಜನೆಗಳು

ಸಾಂಸ್ಕೃತಿಕ ಪುನರುಜ್ಜೀವನ

31 Mar 2023

  • ಸಾಂಸ್ಕೃತಿಕ ಪುನರುಜ್ಜೀವನ

ಕಲೆ ಎಂಬುದು ಎಂದಿಗೂ ಅಭಿವ್ಯಕ್ತಿ ಮತ್ತು ರಚನಶಕ್ತಿಯ ಪ್ರಬಲ ಸಾಧನವಾಗಿದೆ, ಆದರೆ ಅನೇಕ ಮಹತ್ವಾಕಾಂಕ್ಷಿ ಕಲಾವಿದರಿಗೆ, ಕಾರ್ಯಾಗಾರಗಳು ಮತ್ತು ತರಬೇತಿಗೆ ಸೇರುವುದು ಒಂದು ಸವಾಲಾಗಿದೆ. ಈ ಕಾರಣಕ್ಕಾಗಿಯೇ ಉಡುಪಿಯ ಸ್ಥಳೀಯ ಕಲಾವಿದರು ಮತ್ತು ಭಾವನಾ ಫೌಂಡೇಶನ್ ಹಾಗೂ ಭಾಸ ಗ್ಯಾಲರಿಯಂತಹ ಕಲಾ ಸಂಸ್ಥೆಗಳಿಗೆ ಬೆಂಬಲ ನೀಡಲು ವೆಂಟನಾ ಫೌಂಡೇಶನ್ ಬದ್ಧವಾಗಿದೆ.


16 Oct 2022

  • ಸಾಂಸ್ಕೃತಿಕ ಪುನರುಜ್ಜೀವನ

ಕುಂದಾಪುರದ ಗ್ರಾಮೀಣ ಕೇಂದ್ರ ಭಾಗದಲ್ಲಿ ಆಳವಾಗಿ ಬೇರೂರಿರುವ, ಯಕ್ಷಗಾನದ ಗೊಂಬೆಯಾಟ ಕಲೆಯನ್ನು ಗೊಂಬೆ ಮನೆ ಅಕಾಡೆಮಿಯನ್ನು ಮುನ್ನಡೆಸುತ್ತಿರುವ ಕಾಮತ್ ಕುಟುಂಬದವರು ತಲೆಮಾರುಗಳಿಂದಲೂ ಜೀವಂತವಾಗಿ ಇರಿಸಿಕೊಂಡಿದ್ದಾರೆ.

ಈ ಕುಟುಂಬವು 350 ವರ್ಷಗಳಿಂದಲೂ, ಈ ಪ್ರದೇಶದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವಂತಹ ಈ ಸುಂದರವಾದ ಸಾಂಪ್ರದಾಯಿಕ ಕಲಾ ಪ್ರಕಾರವನ್ನು ಉಳಿಸಿಕೊಂಡು ಬಂದಿದೆ. ಆದರೆ, ನಿರಂತರವಾದ ವಿದ್ಯುತ್ ಮೂಲದ ಕೊರತೆಯಿಂದಾಗಿ ವೇದಿಕೆಯಲ್ಲಿ ಪ್ರದರ್ಶನಗಳನ್ನು ಪ್ರದರ್ಶಿಸುವ ಸಾಮರ್ಥ್ಯದಲ್ಲಿ ಅಕಾಡೆಮಿಗೆ ಹಿನ್ನಡೆಯುಂಟಾಗಿತ್ತು. ಆ ಸಮಯದಲ್ಲಿ ವೆಂಟನಾ ಫೌಂಡೇಶನ್, ಜನರೇಟರ್ ಸೆಟ್‌ ಒಂದನ್ನು ದೇಣಿಗೆಯಾಗಿ ನೀಡುವ ಮೂಲಕ, ಸಾಂಸ್ಕೃತಿಕ ಸಂರಕ್ಷಣೆಯ ಪ್ರೀತಿಗೆ ಯಾವುದೇ ಅಡೆತಡೆಯಿಲ್ಲ ಎಂದು ಸಾಬೀತುಪಡಿಸಿತು