ಉಪ್ಪಿನಕುದ್ರು ಯಕ್ಷಗಾನ ಗೊಂಬೆಮನೆ ಅಕಾಡೆಮಿಗೆ ದೇಣಿಗೆ

Published on 16 Oct 2022

  • ಸಾಂಸ್ಕೃತಿಕ ಪುನರುಜ್ಜೀವನ

ಗೊಂಬೆ ಮನೆಗೆ ವಿದ್ಯುತ್ ಶಕ್ತಿಯ ಉಡುಗೊರೆ

ಕುಂದಾಪುರದ ಗ್ರಾಮೀಣ ಕೇಂದ್ರ ಭಾಗದಲ್ಲಿ ಆಳವಾಗಿ ಬೇರೂರಿರುವ, ಯಕ್ಷಗಾನದ ಗೊಂಬೆಯಾಟ ಕಲೆಯನ್ನು ಗೊಂಬೆ ಮನೆ ಅಕಾಡೆಮಿಯನ್ನು ಮುನ್ನಡೆಸುತ್ತಿರುವ ಕಾಮತ್ ಕುಟುಂಬದವರು ತಲೆಮಾರುಗಳಿಂದಲೂ ಜೀವಂತವಾಗಿ ಇರಿಸಿಕೊಂಡಿದ್ದಾರೆ.

ಈ ಕುಟುಂಬವು 350 ವರ್ಷಗಳಿಂದಲೂ, ಈ ಪ್ರದೇಶದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವಂತಹ ಈ ಸುಂದರವಾದ ಸಾಂಪ್ರದಾಯಿಕ ಕಲಾ ಪ್ರಕಾರವನ್ನು ಉಳಿಸಿಕೊಂಡು ಬಂದಿದೆ. ಆದರೆ, ನಿರಂತರವಾದ ವಿದ್ಯುತ್ ಮೂಲದ ಕೊರತೆಯಿಂದಾಗಿ ವೇದಿಕೆಯಲ್ಲಿ ಪ್ರದರ್ಶನಗಳನ್ನು ಪ್ರದರ್ಶಿಸುವ ಸಾಮರ್ಥ್ಯದಲ್ಲಿ ಅಕಾಡೆಮಿಗೆ ಹಿನ್ನಡೆಯುಂಟಾಗಿತ್ತು. ಆ ಸಮಯದಲ್ಲಿ ವೆಂಟಾನಾ ಫೌಂಡೇಶನ್, ಜನರೇಟರ್ ಸೆಟ್‌ ಒಂದನ್ನು ದೇಣಿಗೆಯಾಗಿ ನೀಡುವ ಮೂಲಕ, ಸಾಂಸ್ಕೃತಿಕ ಸಂರಕ್ಷಣೆಯ ಪ್ರೀತಿಗೆ ಯಾವುದೇ ಅಡೆತಡೆಯಿಲ್ಲ ಎಂದು ಸಾಬೀತುಪಡಿಸಿತು.

ಯಕ್ಷಗಾನವು ಗೊಂಬೆಯಾಟದ ಪ್ರಾಚೀನ ರೂಪವಾಗಿದ್ದು; ಇದು ನೂರಾರು ವರ್ಷಗಳಿಂದ ತಲೆಮಾರುಗಳಿಂದ ತಲೆಮಾರುಗಳಿಗೆ ಮುಂದುವರಿಯುತ್ತಾ ಬಂದಿದೆ. ವರ್ಣರಂಜಿತ ವೇಷಭೂಷಣಗಳು ಮತ್ತು ಆಭರಣಗಳನ್ನು ಬಳಸಿ ಗೊಂಬೆಗಳನ್ನು ಕೌಶಲತೆಯಿಂದ ಸುಂದರವಾಗಿ ರಚಿಸಿ, ಅಲಂಕರಿಸಲಾಗಿದೆ, ಇದು ಭಾರತೀಯ ಪುರಾಣಗಳಲ್ಲಿ ಬರುವಂತಹ ದೇವರುಗಳು ಮತ್ತು ರಾಕ್ಷಸರನ್ನು ಪ್ರತಿನಿಧಿಸುತ್ತದೆ. ಗೊಂಬೆಯಾಡಿಸುವವರು ಮಹಾಕಾವ್ಯಗಳು, ದಂತಕಥೆಗಳು ಮತ್ತು ಜಾನಪದ ಕಥೆಗಳಲ್ಲಿನ ಪಾತ್ರಗಳಿಗೆ ಜೀವತುಂಬಲು ಗೊಂಬೆಗಳನ್ನು ಬಳಸಿ ಪ್ರದರ್ಶನವನ್ನು ನೀಡುತ್ತಾರೆ. ಈ ಕಲಾ ಪ್ರಕಾರವನ್ನು ಜೀವಂತವಾಗಿ ಇರಿಸುವುದಕ್ಕಾಗಿ ಯುವಜನರಿಗೆ ಗೊಂಬೆಯಾಟದ ಕೌಶಲವನ್ನು ತರಬೇತಿ ನೀಡಲು ಕಾಮತ್ ಕುಟುಂಬವು ತಲೆಮಾರುಗಳಿಂದಲೂ ತಮ್ಮನ್ನು ಮುಡಿಪಾಗಿಟ್ಟುಕೊಂಡಿದೆ.

 

ಗೊಂಬೆ ಮನೆ ಅಕಾಡೆಮಿಯು ಭಾರತದ ಮೊತ್ತಮೊದಲ ಗೊಂಬೆ ಅಕಾಡೆಮಿಯಾಗಿದೆ ಹಾಗೂ ಕಲಾವಿದರು ತಮ್ಮಲ್ಲಿರುವಂತಹ ಕೌಶಲವನ್ನು ಪ್ರದರ್ಶಿಸುವುದಕ್ಕೆ ಒಂದು ವೇದಿಕೆಯನ್ನು ಒದಗಿಸುವುದಕ್ಕಾಗಿ ಕಾಮತ್ ಕುಟುಂಬದವರು ಇದನ್ನು ಸ್ಥಾಪನೆ ಮಾಡಿದರು. ಆದರೆ, ನಿರಂತರವಾದ ವಿದ್ಯುತ್ ಮೂಲದ ಕೊರತೆಯಿಂದಾಗಿ ಅಕಾಡೆಮಿಗೆ ವೇದಿಕೆಯಲ್ಲಿ ಪ್ರದರ್ಶನಗಳನ್ನು ಪ್ರದರ್ಶಿಸುವ ಸಾಮರ್ಥ್ಯದಲ್ಲಿ ಹಿನ್ನಡೆಯುಂಟಾಗಿತ್ತು. ವಿದ್ಯುತ್ ಕಡಿತ ಮತ್ತು ಏರಿಳಿತಗಳಂತಹ ನಿರಂತರವಾದ ಸಮಸ್ಯೆ, ಸ್ಥಿರವಾದ ವಿದ್ಯುತ್ ಪೂರೈಕೆಯಿಲ್ಲದೆ ಪ್ರದರ್ಶನ ನೀಡುವುದು ಬಹಳ ಕಷ್ಟಕರವಾಗಿತ್ತು. ಈ ಎಲ್ಲಾ ಸವಾಲುಗಳ ಹೊರತಾಗಿಯೂ, ಕಾಮತ್‌ ಅವರು ಈ ಪ್ರಾಚೀನ ಕಲಾ ಪ್ರಕಾರವನ್ನು ಸಂರಕ್ಷಿಸಬೇಕೆಂಬ ತಮ್ಮ ಧ್ಯೇಯಕ್ಕೆ ಅಚಲರಾಗಿದ್ದರು.

ಆ ಸಮಯದಲ್ಲಿ, ವೆಂಟನಾ ಫೌಂಡೇಶನ್ ಸಹಾಯ ನೀಡಲು ಬಂದಿತ್ತು. ವೆಂಟನಾ ಫೌಂಡೇಶನ್ ತಂಡದ ಸದಸ್ಯರಾದಂತಹ ಸುಧೀರ್ ಮತ್ತು ರವೀಂದ್ರ ಕೆ ಅವರು ಗೊಂಬೆ ಮನೆಗೆ ಭೇಟಿ ನೀಡಿ, ಕಾಮತ್‌ ಅವರು ಈ ಕಲಾಪ್ರಕಾರಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟದ್ದನ್ನು ಕಂಡು ಮನಸೋತರು. ಅಕಾಡೆಮಿಗೆ ನಿರಂತರವಾದ ವಿದ್ಯುತ್ ಮೂಲವನ್ನು ಒದಗಿಸುವುದರಿಂದ, ಅವರಿಗೆ ತನ್ನ ಧ್ಯೇಯೋದ್ದೇಶವನ್ನು ಪೂರೈಸಲು ಬಹಳ ದೂರದವರೆಗೆ ಅದು ಸಹಾಯವಾಗಲಿದೆ ಎಂದು ಅವರಿಗೆ ತಿಳಿದುಬಂತು. ವಿದ್ಯುತ್ ಶಕ್ತಿಯ ಅವಶ್ಯಕತೆಗಳನ್ನು ನಿರ್ಣಯಿಸುವುದಕ್ಕಾಗಿ ವಿವಿಧ ತಂತ್ರಜ್ಞರ ಹಲವಾರು ಭೇಟಿಗಳ ನಂತರ, ಜನರೇಟರ್ ಸೆಟ್ ಅನ್ನು ಆಯ್ಕೆಮಾಡಲಾಯಿತು. ಶ್ರೀ ಕಾಮತ್ ಅವರು ತಮ್ಮ ಕಡೆಯಿಂದ ಡಿಜಿ ಕೊಠಡಿ (ಡೀಸೆಲ್ ಜನರೇಟರ್ ರೂಂ) ಅನ್ನು ಸಿದ್ಧಗೊಳಿಸುವುದಕ್ಕಾಗಿ ಅದರ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲು ತಮ್ಮ ಪ್ರಯತ್ನಗಳನ್ನು ಮಾಡಿದರು.

ಗೊಂಬೆ ಮನೆಯಲ್ಲಿನ ಜನರೇಟರ್ ಸೆಟ್ ಉದ್ಘಾಟನೆಯು ಒಂದು ಮಹತ್ವಪೂರ್ಣವಾದ ಕ್ಷಣವಾಗಿತ್ತು. ವೆಂಟನಾ ಫೌಂಡೇಶನ್‌ನ ಟ್ರಸ್ಟಿ ಶ್ರೀಮತಿ ಶಿಲ್ಪಾ ಭಟ್ ಮತ್ತು ಅವರ ತಾಯಿ, ರವೀಂದ್ರ ಕೆ (ಟ್ರಸ್ಟಿ), ಶೈಲಜಾ ರಾವ್ ಮತ್ತು ವಿಘ್ನೇಶ್ ಶೇಟ್ (99 ಗೇಮ್ಸ್) ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈಗ ಡಿಜಿ ಕೊಠಡಿಯಲ್ಲಿ ವೆಂಟನಾ ಫೌಂಡೇಶನ್‌ನ ಹೆಸರನ್ನು ಕಲ್ಲಿನಲ್ಲಿ ಕೆತ್ತಲಾಗಿದೆ, ಈ ಸೌಲಭ್ಯವನ್ನು ಶ್ರೀಮತಿ ಶಿಲ್ಪಾ ಭಟ್ ಅವರಿಂದ ಔಪಚಾರಿಕವಾಗಿ ಉದ್ಘಾಟನೆ ಮಾಡಲಾಯಿತು. ಆ ದಿನದಂದು ಸಂಗೀತ ಕಛೇರಿಯನ್ನು ಆಯೋಜಿಸಲಾಗಿತ್ತು ಮತ್ತು ಮೂಡೆಯಂತಹ ಇತರ ಕೆಲವು ಅತ್ಯುತ್ತಮ ಸ್ಥಳೀಯ ರುಚಿಕರ ಖಾದ್ಯಗಳನ್ನು ನೀಡುವ ಮೂಲಕ ಪ್ರೇಕ್ಷಕರನ್ನು ಉಪಚರಿಸಲಾಯಿತು. ಒಟ್ಟಾರೆಯಾಗಿ, ಆ ದಿನವು ಒಂದು ಸಂಸ್ಕೃತಿ, ಕಲೆ ಮತ್ತು ಸಹಯೋಗ ಮನೋಭಾವದ ಒಂದು ನೈಜ ಆಚರಣೆಯಾಗಿತ್ತು.

ಜನರೇಟರ್ ಸೆಟ್‌ನ ಪ್ರಭಾವದಿಂದಾಗಿ ಅಕಾಡೆಮಿಯು ಇದೀಗ ರೂಪಾಂತರಗೊಂಡಿದೆ. ನಿರಂತರವಾದ ವಿದ್ಯುತ್ ಶಕ್ತಿಯ ಮೂಲದೊಂದಿಗೆ, ಈಗ ಗೊಂಬೆ ಮನೆಯು ಯಾವುದೇ ರೀತಿಯ ಅಡೆತಡೆಗಳಿಲ್ಲದೆಯೇ ಆತ್ಮವಿಶ್ವಾಸದಿಂದ ವೇದಿಕೆಯಲ್ಲಿ ಪ್ರದರ್ಶನಗಳನ್ನು ನೀಡಬಹುದು. ಅಕಾಡೆಮಿಯು ಈಗ ಯುವ ಗೊಂಬೆಯಾಟಗಾರರು ಮತ್ತು ಮಹತ್ವಾಕಾಂಕ್ಷಿ ಕಲಾವಿದರಿಗೆ ತರಬೇತಿ ನೀಡುವುದನ್ನು ಮುಂದುವರಿಸಬಹುದು ಮತ್ತು ಪ್ರದೇಶದಾದ್ಯಂತ ಇರುವ ಪ್ರೇಕ್ಷಕರಿಗೆ ನಶಿಸಿಹೋಗುತ್ತಿರುವ ಕಲೆಯ ಸೊಬಗನ್ನು ಪ್ರದರ್ಶಿಸಬಹುದು.