ನಮ್ಮ ಯೋಜನೆಗಳು

ಸಮುದಾಯದ ಸೇವೆ

27 Jul 2024

  • ಸಮುದಾಯದ ಸೇವೆ

ಉಡುಪಿ ಬೈಲೂರಿನಲ್ಲಿ, ಶ್ರೀಮತಿ ತನುಳಾ ತರುಣ್ ಅವರು ಹಿರಿಯರಿಗಾಗಿ ಸ್ಥಾಪಿಸಿದ ಆರೈಕೆ ಮನೆ ಹೊಸಬೆಳಕು, ಇಲ್ಲಿ ಒಂದು ಅಸಾಧಾರಣ ಕರುಣೆಯ ಕಥೆ ಬಿಚ್ಚಿಕೊಳ್ಳುತ್ತದೆ. ಕೌಟುಂಬಿಕ ಆಸರೆಯಿಲ್ಲದೆ ಕಂಗೆಟ್ಟ ಹಿರಿಯ ನಾಗರಿಕರಿಗಾಗಿ ಇರುವ ಈ ಆಶ್ರಯ ತಾಣ ಅವರಿಗೆ ಆಶಾಕಿರಣವಾಗಿ ಪರಿಣಮಿಸಿದ್ದು, ಸಮುದಾಯದ ಕಾಳಜಿ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ಒಂದು ಉತ್ತಮ ಉದಾಹರಣೆಯಾಗಿದೆ.


16 Nov 2022

  • ಸಮುದಾಯದ ಸೇವೆ

ವೆಂಟನಾ ಫೌಂಡೇಶನ್ ಇತ್ತೀಚೆಗೆ ಗಂಗೊಳ್ಳಿಯಲ್ಲಿ ತಮ್ಮ ಆರೋಗ್ಯ ಕಾಳಜಿ ಉಪಕ್ರಮವನ್ನು ಬೆಂಬಲಿಸಲು ನಿನಾದ ಚಾರಿಟೇಬಲ್ ಟ್ರಸ್ಟ್‌ಗೆ ರೂ 3,00,000ವನ್ನು ಕೊಡುಗೆಯಾಗಿ ನೀಡಿದೆ. ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಟ್ರಸ್ಟ್, ಮೊದಲಿಗೆ ಸಂಗೀತ ಮತ್ತು ಸಾಮಾಜಿಕ ವಿಚಾರಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಆರ್ಥಿಕವಾಗಿ ಹಿಂದುಳಿದವರು, ವಯೋವೃದ್ಧರು ಮತ್ತು ಹಾಸಿಗೆ ಹಿಡಿದವರು ಕೈಗೆಟಕುವಂತಹ ದರದಲ್ಲಿ ಆರೋಗ್ಯ ಕಾಳಜಿ ಸೇವೆಯನ್ನು ಪಡೆದುಕೊಳ್ಳಲು ತ್ರಾಸಿಯಲ್ಲಿ ವೈದ್ಯಕೀಯ ಪ್ರಯೋಗಾಲಯ ಮತ್ತು ರೋಗನಿರ್ಣಯ ಕೇಂದ್ರವನ್ನು (ಸಾಕೇತ) ಸ್ಥಾಪಿಸಿದೆ.


06 Aug 2022

  • ಸಮುದಾಯದ ಸೇವೆ

ವೆಂಟನಾ ಫೌಂಡೇಶನ್‌ನ ಪ್ರಮುಖ ಉದ್ದೇಶವೇನೆಂದರೆ, ಸಮಾಜದ ಹಿಂದುಳಿದ ವರ್ಗದವರು ಮತ್ತು ಆರ್ಥಿಕವಾಗಿ ದುರ್ಬಲವಾದವರಿಗೆ ಪ್ರೋತ್ಸಾಹ ನೀಡುವುದು. ಅರ್ಹ ವ್ಯಕ್ತಿಗಳಿಗೆ ಸಹಾಯ ಹಸ್ತವನ್ನು ನೀಡಲು ಫೌಂಡೇಶನ್ ಶ್ರಮಿಸುತ್ತಿದೆ ಹಾಗೂ ಇದರ ಇತ್ತೀಚಿನ ಉಪಕ್ರಮವು ಇದಕ್ಕೆ ಹೊರತಾಗಿಲ್ಲ. ಇದರ ಪ್ರಾಥಮಿಕ ಉದ್ದೇಶದಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಅಂಶ ಇಲ್ಲದಿದ್ದರೂ ಕೂಡ, ಆಗಸ್ಟ್ 2022 ರಲ್ಲಿ ಫುಕೆಟ್‌ನಲ್ಲಿ ನಡೆದಂತಹ ಪ್ರತಿಷ್ಠಿತ ಥೈಲ್ಯಾಂಡ್ ಕರಾಟೆ ಡೋ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ಗ್ರಾಮೀಣ ಪ್ರದೇಶದ ನಾಲ್ಕು ಪ್ರತಿಭಾವಂತ ಕರಾಟೆ ಕ್ರೀಡಾಪಟುಗಳನ್ನು ಫೌಂಡೇಶನ್ ಬೆಂಬಲಿಸಿದೆ.