ನಿನಾದ ಚಾರಿಟೇಬಲ್ ಟ್ರಸ್ಟ್‌ನ ಆರೋಗ್ಯ ಕಾಳಜಿ ಉಪಕ್ರಮಕ್ಕೆ ಕೊಡುಗೆ
Published on 16 Nov 2022
- ಸಮುದಾಯದ ಸೇವೆ
ವೆಂಟಾನಾ ಫೌಂಡೇಶನ್ ಇತ್ತೀಚೆಗೆ ಗಂಗೊಳ್ಳಿಯಲ್ಲಿ ತಮ್ಮ ಆರೋಗ್ಯ ಕಾಳಜಿ ಉಪಕ್ರಮವನ್ನು ಬೆಂಬಲಿಸಲು ನಿನಾದ ಚಾರಿಟೇಬಲ್ ಟ್ರಸ್ಟ್‌ಗೆ ರೂ 3,00,000ವನ್ನು ಕೊಡುಗೆಯಾಗಿ ನೀಡಿದೆ. ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಟ್ರಸ್ಟ್, ಮೊದಲಿಗೆ ಸಂಗೀತ ಮತ್ತು ಸಾಮಾಜಿಕ ವಿಚಾರಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಆರ್ಥಿಕವಾಗಿ ಹಿಂದುಳಿದವರು, ವಯೋವೃದ್ಧರು ಮತ್ತು ಹಾಸಿಗೆ ಹಿಡಿದವರು ಕೈಗೆಟಕುವಂತಹ ದರದಲ್ಲಿ ಆರೋಗ್ಯ ಕಾಳಜಿ ಸೇವೆಯನ್ನು ಪಡೆದುಕೊಳ್ಳಲು ತ್ರಾಸಿಯಲ್ಲಿ ವೈದ್ಯಕೀಯ ಪ್ರಯೋಗಾಲಯ ಮತ್ತು ರೋಗನಿರ್ಣಯ ಕೇಂದ್ರವನ್ನು (ಸಾಕೇತ) ಸ್ಥಾಪಿಸಿದೆ.
ನಿನಾದ ಚಾರಿಟೇಬಲ್ ಟ್ರಸ್ಟ್‌ಗೆ ವೆಂಟನಾ ಫೌಂಡೇಶನ್ ನೀಡಿದ ಈ ಕೊಡುಗೆಯು ನಮ್ಮ ಪ್ರದೇಶದಲ್ಲಿನ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಕಾಳಜಿ ಸೇವೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಅದೇ ರೀತಿಯ ಇತರ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಏರ್ಪಡಿಸುವ ದೊಡ್ಡ ಧ್ಯೇಯೋದ್ದೇಶದ ಒಂದು ಭಾಗವಾಗಿದೆ. ವೆಂಟನಾ ಫೌಂಡೇಶನ್‌ನ ಪ್ರತಿನಿಧಿಗಳಾದ ಶೈಲಜಾ ಮತ್ತು ರವೀಂದ್ರ ಅವರು ಸೆಪ್ಟೆಂಬರ್ 2022 ರಲ್ಲಿ ನಿನಾದ ಚಾರಿಟೇಬಲ್ ಟ್ರಸ್ಟ್‌ನ ಆರೋಗ್ಯ ಕಾಳಜಿ ಸೇವಾ ಉಪಕ್ರಮವನ್ನು ನೋಡಲು ಗಂಗೊಳ್ಳಿ ಸಂಗ್ರಹಣಾ ಕೇಂದ್ರಕ್ಕೆ ಭೇಟಿ ನೀಡಿದರು. ಟ್ರಸ್ಟ್‌ನಿಂದ ನಿರ್ವಹಿಸಲಾಗುತ್ತಿರುವ ಉದಾರ ಕೆಲಸಗಳಿಂದ ಅವರು ಪ್ರಭಾವಿತರಾದರು ಮತ್ತು ಗ್ರಾಮೀಣ ಸಮಾಜದ ಹಿಂದುಳಿದ ಜನರು ಉತ್ತಮ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಸಹಾಯವಾಗಲೆಂದು ರೂ 3,00,000 ಕೊಡುಗೆಯನ್ನು ನೀಡಲು ನಿರ್ಧರಿಸಿದರು.
ನಿನಾದ ಚಾರಿಟೇಬಲ್ ಟ್ರಸ್ಟ್‌ನಿಂದ ಸ್ಥಾಪಿಸಲಾದ ಸಾಕೇತ ವೈದ್ಯಕೀಯ ಪ್ರಯೋಗಾಲಯ ಮತ್ತು ರೋಗನಿರ್ಣಯ ಕೇಂದ್ರವು ಗ್ರಾಮೀಣ ಪ್ರದೇಶದ ಜನರಾದ, ವಿಶೇಷವಾಗಿ ವಯೋವೃದ್ಧ, ಹಾಸಿಗೆ ಹಿಡಿದ ಮತ್ತು ಆರ್ಥಿಕವಾಗಿ ಹಿಂದುಳಿದ ಜನರ ಆರೋಗ್ಯ ಅಗತ್ಯಗಳನ್ನು ಪೂರೈಸುತ್ತದೆ . ರೋಗನಿರ್ಣಯ ಕೇಂದ್ರವು ಎಲ್ಲಾ ವಿಧದ ಸುಸಜ್ಜಿತ ಉಪಕರಣಗಳನ್ನು ಹೊಂದಿದೆ ಮತ್ತು ಹಲವಾರು ಪ್ರಾಯೋಜಕರ ಕೊಡುಗೆಯಿಂದ ಇದನ್ನು ಸ್ಥಾಪಿಸಲಾಗಿದೆ. ಉತ್ತಮ ಸಾಮಾಜಿಕ ಹಿನ್ನೆಲೆಯಿಂದ ಬಂದ ಮತ್ತು ಟ್ರಸ್ಟ್‌ನ ಉಪಕ್ರಮಗಳಲ್ಲಿ, ಅದನ್ನು ಬೆಂಬಲಿಸುವ ಸುಮಾರು 15 ಟ್ರಸ್ಟಿಗಳನ್ನು ಟ್ರಸ್ಟ್ ಹೊಂದಿದೆ. ಅವರಲ್ಲಿ ಹಲವರು ವೈದ್ಯರೂ ಆಗಿರುವುದರಿಂದ, ರೋಗನಿರ್ಣಯ ಕೇಂದ್ರ ಮತ್ತು ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಲು ಇದು ಸಹಾಯ ಮಾಡಿದೆ.
ಟ್ರಸ್ಟ್ ಕಾರ್ಯನಿರ್ವಹಿಸುತ್ತಿರುವ ಹಲವಾರು ಕೇಂದ್ರಗಳಲ್ಲಿ ಗಂಗೊಳ್ಳಿ ಕೇಂದ್ರವೂ ಒಂದಾಗಿದೆ ಮತ್ತು ಇದು ಈಗಾಗಲೇ 2022 ರ ಅಂತ್ಯದ ಸಮಯದಲ್ಲಿ ಗ್ರಾಮೀಣ ಪ್ರದೇಶದ 4,000 ಕ್ಕೂ ಹೆಚ್ಚು ರೋಗಿಗಳಿಗೆ ಆರೋಗ್ಯ ಸೇವೆಗಳನ್ನು ಒದಗಿಸಿದೆ. ಸಂಗ್ರಹಣಾ ಕೇಂದ್ರಗಳು ಮನೆಗೆ ಹೋಗಿ ಸೇವೆಗಳನ್ನು ಒದಗಿಸುತ್ತವೆ, ಇದು ವಿಶೇಷವಾಗಿ ತ್ರಾಸಿಯಲ್ಲಿನ ರೋಗನಿರ್ಣಯ ಕೇಂದ್ರಕ್ಕೆ ಭೇಟಿ ನೀಡಲು ಸಾಧ್ಯವಾಗದ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ದೊಡ್ಡ ಆಸ್ಪತ್ರೆಗಳಿಗೆ ಮತ್ತು ಚಿಕಿತ್ಸಾಲಯಗಳಿಗೆ ಹೋಲಿಸಿದರೆ ಬೆಲೆಗಳನ್ನು ಕೈಗೆಟುಕುವ ದರದಲ್ಲಿ ನಿಗದಿಪಡಿಸಲಾಗಿದೆ, ಇದು ಸಮಾಜದ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇವೆಯನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ ಮಾಡಲಾಗಿದೆ.
ಆರೋಗ್ಯ ಕಾಳಜಿಯ ಜೊತೆಗೆ, ನಿನಾದ ಚಾರಿಟೇಬಲ್ ಟ್ರಸ್ಟ್ ಸಂಗೀತ ಮತ್ತು ಸಾಮಾಜಿಕ ಆಶಯಗಳ ಮೇಲೆಯೂ ಗಮನ ಕೇಂದ್ರೀಕರಿಸುತ್ತದೆ. ಇದು ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ ಮತ್ತು 12 ವರ್ಷಗಳಿಂದ ನಿರ್ವಹಣೆ ವೆಚ್ಚ ಅಧಿಕವಾಗಿದ್ದರೂ ಕಳೆದ 20 ವರ್ಷಗಳಿಂದ ಗಂಗೊಳ್ಳಿಯಲ್ಲಿ ಸಂಗೀತ ಮತ್ತು ವಾದ್ಯ ತರಗತಿಗಳನ್ನು ಆಯೋಜಿಸುತ್ತಿದೆ. ಗಂಗೊಳ್ಳಿಯ ಸಮೀಪ ಐದು ಎಕರೆ ಜಾಗದಲ್ಲಿ ಗೋಸಂರಕ್ಷಣೆಯ ಬೃಹತ್ ಯೋಜನೆಯನ್ನೂ ಕೈಗೆತ್ತಿಕೊಂಡಿದ್ದು, ಸದ್ಯ ಖರೀದಿಯ ಹಂತದಲ್ಲಿದೆ. ಇದು ಬಹುಕೋಟಿ ವೆಚ್ಚದ ಯೋಜನೆಯಾಗಿದ್ದು, ಟ್ರಸ್ಟ್ ಪ್ರಾಯೋಜಕರಿಗಾಗಿ ನಿರೀಕ್ಷೆಯಲ್ಲಿದೆ. ಭೂಮಿಯನ್ನು ಖರೀದಿಸಿದ ನಂತರ, ಉತ್ತಮ ನಿರ್ವಹಣೆ ಮತ್ತು ಆರೈಕೆಗಾಗಿ ಗೋವುಗಳನ್ನು ಅಲ್ಲಿ ಇರಿಸಿಕೊಳ್ಳುವುದು ಟ್ರಸ್ಟ್ ನ ಉದ್ದೇಶವಾಗಿದೆ.
ನಿನಾದ ಚಾರಿಟೇಬಲ್ ಟ್ರಸ್ಟ್‌ನ ಆರೋಗ್ಯ ಕಾಳಜಿ ಉಪಕ್ರಮಕ್ಕೆ ವೆಂಟನಾ ಫೌಂಡೇಶನ್ ನೀಡಿದ ಕೊಡುಗೆಯು ಸಂಗೀತ ಮತ್ತು ಸಾಮಾಜಿಕ ಆಶಯಗಳ ಅದರ ಪ್ರಯತ್ನಗಳ ಜೊತೆಗೆ ಗ್ರಾಮೀಣ ಭಾರತದಲ್ಲಿ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ಕಾಳಜಿಯನ್ನು ಒದಗಿಸುವ ಕಡೆಗೆ ಒಂದು ಹೆಜ್ಜೆಯಾಗಿದೆ. ನಮ್ಮ ಬೆಂಬಲದೊಂದಿಗೆ, ಟ್ರಸ್ಟ್ ತನ್ನ ಉದಾರ ಕೆಲಸಗಳನ್ನು ಮುಂದುವರೆಸಬಹುದು ಮತ್ತು ನಮ್ಮ ಪ್ರದೇಶದ ಜನರ ಜೀವನವನ್ನು ಸುಧಾರಿಸಬಹುದು ಎಂದು ನಾವು ಭಾವಿಸುತ್ತೇವೆ.