ಉದಯೋನ್ಮುಖ ಕರಾಟೆ ಕ್ರೀಡಾಪಟುಗಳಿಗೆ ಪ್ರೋತ್ಸಾಹ

Published on 06 Aug 2022

  • ಸಮುದಾಯದ ಸೇವೆ

ವೆಂಟನಾ ಫೌಂಡೇಶನ್‌ನ ಪ್ರಮುಖ ಉದ್ದೇಶವೇನೆಂದರೆ, ಸಮಾಜದ ಹಿಂದುಳಿದ ವರ್ಗದವರು ಮತ್ತು ಆರ್ಥಿಕವಾಗಿ ದುರ್ಬಲವಾದವರಿಗೆ ಪ್ರೋತ್ಸಾಹ ನೀಡುವುದು. ಅರ್ಹ ವ್ಯಕ್ತಿಗಳಿಗೆ ಸಹಾಯ ಹಸ್ತವನ್ನು ನೀಡಲು ಫೌಂಡೇಶನ್ ಶ್ರಮಿಸುತ್ತಿದೆ ಹಾಗೂ ಇದರ ಇತ್ತೀಚಿನ ಉಪಕ್ರಮವು ಇದಕ್ಕೆ ಹೊರತಾಗಿಲ್ಲ. ಇದರ ಪ್ರಾಥಮಿಕ ಉದ್ದೇಶದಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಅಂಶ ಇಲ್ಲದಿದ್ದರೂ ಕೂಡ, ಆಗಸ್ಟ್ 2022 ರಲ್ಲಿ ಫುಕೆಟ್‌ನಲ್ಲಿ ನಡೆದಂತಹ ಪ್ರತಿಷ್ಠಿತ ಥೈಲ್ಯಾಂಡ್ ಕರಾಟೆ ಡೋ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ಗ್ರಾಮೀಣ ಪ್ರದೇಶದ ನಾಲ್ಕು ಪ್ರತಿಭಾವಂತ ಕರಾಟೆ ಕ್ರೀಡಾಪಟುಗಳನ್ನು ಫೌಂಡೇಶನ್ ಬೆಂಬಲಿಸಿದೆ.

ಕ್ರೀಡಾಪಟುಗಳು - ಚೇತನ್ ಕುಮಾರ್, ಪವನ್ ಪೂಜಾರಿ, ಭರತ್ ದೇವಾಡಿಗ ಮತ್ತು ಅಜಯ್ ದೇವಾಡಿಗ - ಎಲ್ಲರೂ ಕುಂದಾಪುರದ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜ್‌ನ ವಿದ್ಯಾರ್ಥಿಗಳು. ರಾಷ್ಟ್ರೀಯ ಆಯ್ಕೆದಾರರಿಂದ ಅವರ ಪ್ರತಿಭೆ ಮತ್ತು ಕೌಶಲ ಗುರುತಿಸಲ್ಪಟ್ಟಿದ್ದರೂ, ಅಂತರರಾಷ್ಟ್ರೀಯ ಪಂದ್ಯಾವಳಿಗೆ ಹಾಜರಾಗಲು ಹಣಕಾಸಿನ ನೆರವಿಗಾಗಿ ಅವರು ಕಷ್ಟಪಡುತ್ತಿದ್ದರು. ಆ ಸಮಯದಲ್ಲಿ ವೆಂಟನಾ ಫೌಂಡೇಶನ್ ಅವರಿಗೆ ಹಣಕಾಸಿನ ನೆರವನ್ನು ಒದಗಿಸಿತ್ತು.

ಜುಲೈ 2022 ರಲ್ಲಿ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬಂದಂತಹ ಥಾಯ್ಲೆಂಡ್ ಕರಾಟೆ ಡೋ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದ ನಾಲ್ವರು ಕ್ರೀಡಾಪಟುಗಳ ಕುರಿತಾದ ಸುದ್ದಿ ಲೇಖನವು ಫೌಂಡೇಶನ್‌ನ ಗಮನ ಸೆಳೆದಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಈ ಕ್ರೀಡಾಪಟುಗಳಿಗೆ ತಮ್ಮ ಸಾಧನೆಯ ಹಾದಿಯಲ್ಲಿ ಆರ್ಥಿಕ ಅಡೆತಡೆಗಳಿದ್ದರೂ ಸಹ, ಅವರ ಸಮರ್ಪಣೆ ಮತ್ತು ಸ್ಥಿರಸಂಕಲ್ಪ ಕಂಡು ಫೌಂಡೇಶನ್‌ ಪ್ರಭಾವಿತಗೊಂಡಿತು.

ಕ್ರೀಡಾಪಟುಗಳ ಸಂಕಷ್ಟಗಳ ಬಗ್ಗೆ ತಿಳಿದುಕೊಂಡ ನಂತರ, ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವರ ಪ್ರಯಾಣ ಮತ್ತು ವಸತಿ ವೆಚ್ಚಗಳಿಗೆ ಪ್ರತಿಯೊಬ್ಬ ಕ್ರೀಡಾಪಟುಗಳಿಗೆ ರೂ.50,000 ಚೆಕ್ ಅನ್ನು ಒದಗಿಸಲು ವೆಂಟನಾ ಫೌಂಡೇಶನ್‌ನ ನಿರ್ಧರಿಸಿತು. ಆಗಸ್ಟ್ 6, 2022 ರಂದು ಚೆಕ್ ಹಸ್ತಾಂತರಗೊಳಿಸುವ ಕಾರ್ಯಕ್ರಮವನ್ನು ನಡೆಸಲಾಯಿತು ಮತ್ತು ಫಿಟ್‌ನೆಸ್ ತಜ್ಞ ಮತ್ತು 99 ಗೇಮ್ಸ್‌ನ ಪ್ರತಿನಿಧಿಯಾದ ಶ್ರೀ ಷಣ್ಮುಖರಾಜ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬೆಂಬಲಿಸಿ, ಅವರು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮಿಂಚಲು ಅವಕಾಶ ಕಲ್ಪಿಸುವ ವೆಂಟನಾ ಫೌಂಡೇಶನ್‌ನ ಧ್ಯೇಯವನ್ನು ಶ್ಲಾಘಿಸಿದರು.

ವೆಂಟನಾ ಫೌಂಡೇಶನ್ ನೀಡಿದ ಬೆಂಬಲಕ್ಕಾಗಿ ನಾಲ್ಕೂ ಕ್ರೀಡಾಪಟುಗಳು ಕೃತಜ್ಞತೆಯಿಂದ ಭಾವಪರವಶವಾದರು. ತಮ್ಮ ಪ್ರಯಾಣ ಮತ್ತು ವಸತಿ ವೆಚ್ಚಗಳಿಗೆ ಹಣಕಾಸು ಸಹಾಯವನ್ನು ಪಡೆಯಲು ಹಲವು ಪ್ರಾಯೋಜಕರನ್ನು ಹುಡುಕುವ ಒತ್ತಡದಿಂದ ಮುಕ್ತರಾದರು. ಇದರಿಂದಾಗಿ ಅವರು ತಮ್ಮ ತರಬೇತಿಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಅವಕಾಶ ಮಾಡಿಕೊಟ್ಟಿತು. ಅಂತಿಮ ಫಲಿತಾಂಶವಾಗಿ, ಒಬ್ಬ ಕ್ರೀಡಾಪಟುವು ಕಂಚಿನ ಪದಕವನ್ನು ತಂದು, ತಮ್ಮ ಕಾಲೇಜು ಮತ್ತು ಸಮುದಾಯಕ್ಕೆ ಹೆಮ್ಮೆಯನ್ನು ತಂದರು.

ಈ ಉದಯೋನ್ಮುಖ ಕರಾಟೆ ಕ್ರೀಡಾಪಟುಗಳನ್ನು ಬೆಂಬಲಿಸುವ ಮುತುವರ್ಜಿಯು ವೆಂಟನಾ ಫೌಂಡೇಶನ್‌ನ ಹಿಂದುಳಿದ ವರ್ಗಗಳ ವ್ಯಕ್ತಿಗಳನ್ನು ಉನ್ನತಿಗೇರಿಸುವ ಮತ್ತು ಅವರಿಗೆ ಯಶಸ್ಸನ್ನು ಗಳಿಸಲು ಅವಕಾಶಗಳನ್ನು ನೀಡುವ ಅದರ ಬದ್ಧತೆಗೆ ಸಾಕ್ಷಿಯಾಗಿದೆ. ಕ್ರೀಡೆಯ ಪ್ರಚಾರ ಅದರ ಪ್ರಾಥಮಿಕ ಗುರಿಯಾಗಿರದಿದ್ದರೂ, ಗ್ರಾಮೀಣ ಪ್ರದೇಶದಲ್ಲಿರುವಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮತ್ತು ಅವರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತಲುಪುವುದಕ್ಕಾಗಿ ಅಗತ್ಯವಿರುವ ಸಹಾಯವನ್ನು ಒದಗಿಸುವ ಮಹತ್ವವನ್ನು ಫೌಂಡೇಶನ್ ಮನಗಂಡಿದೆ.

ವೆಂಟನಾ ಫೌಂಡೇಶನ್ ತನ್ನ ಈ ಉಪಕ್ರಮದ ಮೂಲಕ, ಗ್ರಾಮೀಣ ಪ್ರದೇಶದ ಮಹತ್ವಾಕಾಂಕ್ಷಿ ಕ್ರೀಡಾಪಟುಗಳ ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆಯೇ ಅವರ ಕನಸುಗಳನ್ನು ಈಡೇರಿಸುವುದಕ್ಕಾಗಿ ಅವರನ್ನು ಉತ್ತೇಜಿಸುವ ಮತ್ತು ಪ್ರೋತ್ಸಾಹಿಸುವ ಅಭಿಲಾಷೆಯನ್ನು ಹೊಂದಿದೆ.

ಅರ್ಹ ಕ್ರೀಡಾಪಟುಗಳಿಗೆ ಹಣಕಾಸಿನ ಸಹಾಯವನ್ನು ನೀಡುವ ಮೂಲಕ, ಅವರಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬಹುದು ಮತ್ತು ಎಲ್ಲರನ್ನು ಒಳಗೊಳ್ಳುವ ಮತ್ತು ಸಮಾನ ಸಮಾಜದ ಬೆಳವಣಿಗೆಗೆ ಸಹಾಯ ಮಾಡಬಹುದು ಎಂಬುದರ ಮೇಲೆ ಫೌಂಡೇಶನ್ ನಂಬಿಕೆಯಿರಿಸಿದೆ. ಫೌಂಡೇಶನ್‌ನ ಶ್ರಮವು ಯಾವುದೇ ನಿರ್ದಿಷ್ಟ ಕ್ಷೇತ್ರಕ್ಕೆ ಸೀಮಿತವಾಗಿಲ್ಲ ಮತ್ತು ಅವರು ಜೀವನದ ಎಲ್ಲಾ ವರ್ಗಗಳಲ್ಲಿನ ಅರ್ಹ ವ್ಯಕ್ತಿಗಳನ್ನು ಬೆಂಬಲಿಸಲು ಬದ್ಧರಾಗಿದ್ದಾರೆ. ಈ ಕ್ರೀಡಾಪಟುಗಳನ್ನು ಬೆಂಬಲಿಸುವ ಮೂಲಕ ಅವರ ಉಪಕ್ರಮವು, ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಹಾಗೂ ತಮ್ಮ ಸಾಮರ್ಥ್ಯವನ್ನು ತಲುಪಲು ಸಮಾನ ಅವಕಾಶಕ್ಕೆ ಅರ್ಹರು ಎಂಬುದನ್ನು ನೆನಪಿಸುತ್ತದೆ.

News Coverage

Vijaya Karnataka

06 Aug 2022

Read more