ನಮ್ಮ ಯೋಜನೆಗಳು
23 Aug 2024
- ಪರಿಸರ ಸಂರಕ್ಷಣೆ
ಹಸುರು ನಿರಂತರವಾಗಿ ಕಡಿಮೆಯಾಗುತ್ತಾ ಹೋಗುವುದನ್ನು ನೋಡುವಾಗ, ಪರಿಸರ ಸಂರಕ್ಷಣೆ ಮಹತ್ವದ್ದೆನಿಸುತ್ತದೆ - ಮತ್ತು ವೆಂಟನಾ ಫೌಂಡೇಶನ್ ಹಾವಂಜೆ ಗ್ರಾಮದಲ್ಲಿ ಭರವಸೆಯ ಉಪಕ್ರಮವನ್ನು ಪ್ರಾರಂಭಿಸುವ ಮೂಲಕ ಅರಣ್ಯ ಬೆಳೆಸುವತ್ತ ತನ್ನ ಮೊದಲ ಮಹತ್ವದ ಹೆಜ್ಜೆಯನ್ನು ತೆಗೆದುಕೊಂಡಿದೆ. ಈ ಯೋಜನೆಯು ಪರಿಸರ ಸಂರಕ್ಷಣೆಗೆ ಕೇವಲ ಬದ್ಧತೆಯನ್ನು ತೋರಿಸುವುದಷ್ಟೇ ಅಲ್ಲ, ಇದು ಜೀವ ವೈವಿಧ್ಯತೆಯನ್ನು ಸಂರಕ್ಷಿಸುವ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸುವ ಚಿಂತನಶೀಲ ವಿಧಾನವಾಗಿದೆ.
17 May 2022
- ಪರಿಸರ ಸಂರಕ್ಷಣೆ
ಕುಂಭಾಶಿಯ ಕೊಯ್ಯಾರಿ ಕೆರೆ ಸುಮಾರು 25 ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಕಳೆ ಮತ್ತು ಕೆಸರು ತುಂಬಿ, ಬಳಕೆಗೆ ಯೋಗ್ಯವಿಲ್ಲದಂತೆ ಇತ್ತು. ಪಂಚಾಯಿತಿ ಹಾಗೂ ಸ್ಥಳೀಯ ಸಮುದಾಯದ ಸಹಯೋಗದೊಂದಿಗೆ ಅದರ ಮೊದಲಿನ ಭವ್ಯತೆಯನ್ನು ಮರಳಿ ತರುವ ಸವಾಲನ್ನು ವೆಂಟನಾ ಫೌಂಡೇಶನ್ ತೆಗೆದುಕೊಂಡಿತು