
ಕುಂಭಾಶಿಯ ಕೊಯ್ಯಾರಿ ಕೆರೆಯ ಪುನಶ್ಚೇತನ
Published on 17 May 2022
- ಪರಿಸರ ಸಂರಕ್ಷಣೆ
ಕುಂಭಾಶಿಯ ಕೊಯ್ಯಾರಿ ಕೆರೆ ಸುಮಾರು 25 ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಕಳೆ ಮತ್ತು ಕೆಸರು ತುಂಬಿ, ಬಳಕೆಗೆ ಯೋಗ್ಯವಿಲ್ಲದಂತೆ ಇತ್ತು. ಪಂಚಾಯಿತಿ ಹಾಗೂ ಸ್ಥಳೀಯ ಸಮುದಾಯದ ಸಹಯೋಗದೊಂದಿಗೆ ಅದರ ಮೊದಲಿನ ಭವ್ಯತೆಯನ್ನು ಮರಳಿ ತರುವ ಸವಾಲನ್ನು ವೆಂಟನಾ ಫೌಂಡೇಶನ್ ತೆಗೆದುಕೊಂಡಿತು.
ಜೆಸಿಬಿಯ ಸಾಂಪ್ರದಾಯಿಕ ಪೂಜೆಯೊಂದಿಗೆ ಯೋಜನೆಯು ಪ್ರಾರಂಭವಾಯಿತು, ರೋಹಿತ್ ಭಟ್ ಮತ್ತು ರವೀಂದ್ರ ಕೆ ಭಾಗವಹಿಸಿದ್ದರು. ಗ್ರಾಮಸ್ಥರು ಯೋಜನೆಯ ಬಗ್ಗೆ ಉತ್ಸುಕರಾಗಿದ್ದರು ಮತ್ತು ಅವರಿಂದ ಸಾಧ್ಯವಾದಷ್ಟು ಯಾವುದೇ ರೀತಿಯ ಸಹಾಯ ಮಾಡಲು ಕಾತುರರಾಗಿದ್ದಾರೆ.
ಆದಾಗ್ಯೂ, ಈ ಕಾರ್ಯವು ಸುಲಭವಾಗಿರಲಿಲ್ಲ. ಹೂಳು ತುಂಬಾ ಆಳವಾಗಿದ್ದು, ಸ್ವಚ್ಛತಾ ಕಾರ್ಯಕ್ಕೆ ಬಳಸಲಾಗಿದ್ದ ಜೆಸಿಬಿ ಯಂತ್ರ ಎರಡು ಬಾರಿ ಸಿಲುಕಿಕೊಂಡಿತ್ತು. ಆ ಸಮಯದಲ್ಲಿ ಚಂಡಮಾರುತದಿಂದಾಗಿ ಮಳೆಯು ಬೇಗನೆ ಬರುವ ಭಯವೂ ಇತ್ತು ಆದರೆ ಗ್ರಾಮಸ್ಥರ ನಿರಂತರ ಶ್ರಮದಿಂದ, ಮತ್ತು ಹಗಲು ರಾತ್ರಿ ಹಲವಾರು ಪಂಪ್‌ಗಳ ಸಹಾಯದಿಂದ ಯೋಜನೆಯನ್ನು ಕೆಲವೇ ವಾರಗಳಲ್ಲಿ ಪೂರ್ಣಗೊಳಿಸಲಾಯಿತು.



ತೆಗೆದ ಹೂಳನ್ನು ಸುರಿಯಲು ಬರಡು ಭೂಮಿಯನ್ನು ಒದಗಿಸುವ ಮತ್ತು ಹೂಳನ್ನು ಸಾಗಿಸಲು ಲಾರಿಗಳಿಗೆ ದಾರಿಯನ್ನು ತೆರವುಗೊಳಿಸುವ ಮೂಲಕ ಗ್ರಾಮಸ್ಥರು ಕೂಡ ಯೋಜನೆಗೆ ನಿರ್ಬಂಧವಿಲ್ಲದೆ ಬೆಂಬಲ ನೀಡಿದರು. ಶುಚಿಗೊಳಿಸುವ ಪ್ರಕ್ರಿಯೆಯ ಸಂದರ್ಭ ಅವರು ಕೆರೆಯಿಂದ ಬೃಹತ್ ಮೀನುಗಳನ್ನು ಸಂಗ್ರಹಿಸಿ ಆನಂದಿಸಿದರು. ಇದು ಒಂದು ಸಂಪೂರ್ಣ ಗೆಲುವಿನ ಸಂದರ್ಭ!
ಸವಾಲುಗಳ ನಡುವೆಯೂ, 2022 ರ ಮೇ 17 ರಂದು ಸ್ವಚ್ಛಗೊಳಿಸಿದ ಜಲಮೂಲವನ್ನು ಪಂಚಾಯತ್‌ಗೆ ಹಸ್ತಾಂತರಿಸಲಾಯಿತು. ಶೈಲಜಾ ರಾವ್ ಮತ್ತು ಸುಧೀರ್ ಭಟ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೊಯ್ಯಾರಿ ಕೆರೆಯನ್ನು ಈಗ ಸ್ಥಳೀಯ ರೈತರು ಕೃಷಿ ಚಟುವಟಿಕೆಗೆ ಬಳಸುತ್ತಾರೆ, ಕುಡಿಯಲು, ಕೃಷಿಗೆ ನೀರು ಉಪಯೋಗವಾಗುತ್ತದೆ ಮತ್ತು ಇದು ಈ ಪ್ರದೇಶದ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸಿದೆ. ಸರೋವರವು ಈಗ ಪಕ್ಷಿಗಳ ವಾಸಸ್ಥಾನವಾಗಿದೆ, ಸುತ್ತಲಿನ ಪ್ರದೇಶವನ್ನು ತಂಪಾಗಿಡುತ್ತದೆ ಮತ್ತು ಸ್ವಚ್ಛವಾಗಿಡುತ್ತದೆ.
ಯೋಜನೆ ಮುಗಿದು ಕೆಲವು ತಿಂಗಳುಗಳ ನಂತರ, ಫೆಬ್ರವರಿ 2023 ರಲ್ಲಿ, ಸ್ಥಳೀಯ ರೈತರು ಕೃತಜ್ಞತೆಯ ಸಂಕೇತವಾಗಿ ಬೆಳೆಸಿದ ತಾಜಾ ಕಡಲೆಕಾಯಿಯನ್ನು ಫೌಂಡೇಶನ್‌ಗೆ ನೀಡಿದರು, ರೈತರ ಈ ಪ್ರೀತಿಗೆ ವೆಂಟನಾ ಫೌಂಡೇಶನ್ ತಂಡ ಆಶ್ಚರ್ಯಪಟ್ಟುಕೊಂಡರು ಮತ್ತು ಭಾವಪರವಶರಾದರು.


ಕೊಯ್ಯಾರಿ ಕೆರೆಯನ್ನು ಪುನಶ್ಚೇತನಗೊಳಿಸುವ ಯೋಜನೆಯು ಪರಿಸರ ಸಂರಕ್ಷಣೆಯ ಕುರಿತ ವೆಂಟನಾ ಫೌಂಡೇಶನ್‌ನ ಬದ್ಧತೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ಉಪಕ್ರಮವು ಸಮುದಾಯದ ಸಾಮಾಜಿಕ-ಆರ್ಥಿಕ ಅಗತ್ಯಗಳನ್ನು ಬೆಂಬಲಿಸಲು ಮಾತ್ರವಲ್ಲದೆ ಜಲಚರ ಜೀವಿಗಳ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಯೋಜನೆಯ ಯಶಸ್ಸು ವೆಂಟನಾ ಫೌಂಡೇಶನ್, ಸ್ಥಳೀಯ ಸಮುದಾಯ ಮತ್ತು ಸರ್ಕಾರದ ನಡುವಿನ ಸಹಯೋಗದ ಶಕ್ತಿಗೆ ಸಾಕ್ಷಿಯಾಗಿದೆ. ಇದು ಭರವಸೆ ಮತ್ತು ನವೀಕರಣದ ಸ್ಪೂರ್ತಿದಾಯಕ ಕಥೆಯಾಗಿದ್ದು, ದೃಢಸಂಕಲ್ಪ ಮತ್ತು ಒಗ್ಗಟ್ಟಿನ ಕೆಲಸದಿಂದ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸುತ್ತದೆ.