
ಉಡುಪಿ ಪರಿಸರದ ಶಾಲೆಗಳಿಗೆ ಡೆಸ್ಕ್‌ಗಳ ಕೊಡುಗೆ
Published on 01 Jun 2022
- ಶಿಕ್ಷಣ
ವೆಂಟನಾ ಫೌಂಡೇಶನ್ ಎಂಬ ಸಮಾಜಮುಖಿ ಸಂಸ್ಥೆಯು ಉಡುಪಿ ಭಾಗದ ವಿದ್ಯಾರ್ಥಿಗಳಿಗೆ ಆರಾಮದಾಯಕ ಕಲಿಕೆಯ ವಾತಾವರಣವನ್ನು ಕಲ್ಪಿಸುವ ಕಾರ್ಯವನ್ನು ಕೈಗೆತ್ತಿಕೊಂಡಿತು. ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಕಲಿಕೆಯ ವಾತಾವರಣವನ್ನು ರೂಪಿಸುವಲ್ಲಿ ಅವರ ಆಸನ ವ್ಯವಸ್ಥೆಗಳು ಮತ್ತು ಡೆಸ್ಕ್‌ಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಫೌಂಡೇಶನ್ ಮನಗಂಡಿದೆ. ಅದಕ್ಕಾಗಿ, ಅವರು ತಮ್ಮ ದಾಸ್ತಾನುಗಳಲ್ಲಿ ಬಳಕೆಯಾಗದೆ ಉಳಿದಂತಹ ಡೆಸ್ಕ್‌ಗಳನ್ನು ಸರಿಪಡಿಸಿ, ಅವುಗಳನ್ನು ಪರಿಸರ ದಲ್ಲಿನ ವಿವಿಧ ಶಾಲೆಗಳಿಗೆ ವಿತರಿಸಲು ನಿರ್ಧರಿಸಿದರು.
ವೆಂಟನಾ ಫೌಂಡೇಶನ್, ತಮ್ಮ ಬಳಿ ಇದ್ದಂತಹ 10-12 ಡೆಸ್ಕ್‌ಗಳನ್ನು ದುರಸ್ತಿ ಮಾಡಲು ಕಾರ್ಪೆಂಟರ್ ತಂಡವನ್ನು ನಿಯೋಜಿಸಿದ್ದರು. ಕೇವಲ ಹತ್ತು ದಿನಗಳಲ್ಲಿ ಡೆಸ್ಕ್‌ಗಳನ್ನು ದುರಸ್ತಿ ಮಾಡಿ ಬಳಕೆಯ ರೂಪಕ್ಕೆ ತರಲಾಯಿತು. ತಮ್ಮಲ್ಲಿ ಬಳಕೆಯಾಗದಂತಹ ಈ ಡೆಸ್ಕ್‌ಗಳನ್ನು ದುರಸ್ತಿಪಡಿಸಿದಲ್ಲಿ ಸುತ್ತಮುತ್ತಲಿನ ಶಾಲೆಗಳಿಗೆ ಉಪಯುಕ್ತವಾಗಬಹುದು ಎಂದು ಅವರು ನಂಬಿದ್ದರಿಂದ ಈ ಡೆಸ್ಕ್‌ಗಳನ್ನು ದುರಸ್ತಿ ಮಾಡಲು ಫೌಂಡೇಶನ್ ಕ್ರಮಗಳನ್ನು ಕೈಗೊಂಡಿತು.
ಡೆಸ್ಕ್‌ಗಳು ದುರಸ್ತಿಗೊಂಡ ನಂತರ, ಅವುಗಳನ್ನು ಕಕ್ಕುಂಜೆ ಮತ್ತು ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕಳುಹಿಸಲಾಯಿತು. ಈ ಡೆಸ್ಕ್‌ಗಳನ್ನು ಶಾಲೆಗಳು ಸಂತೋಷದಿಂದ ಸ್ವೀಕರಿಸಿದವು ಹಾಗೂ ಫೌಂಡೇಶನ್‌ನ ಉದಾರ ಕಾರ್ಯಕ್ಕಾಗಿ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು. ಯಾವುದೇ ವೆಚ್ಚವಿಲ್ಲದೆ ಶಾಲೆಗಳಿಗೆ ಡೆಸ್ಕ್‌ಗಳನ್ನು ಒದಗಿಸಲಾಗಿದೆ ಮತ್ತು ಈ ಉಪಕ್ರಮಕ್ಕಾಗಿ ಯಾವುದೇ ಔಪಚಾರಿಕ ಕಾರ್ಯಕ್ರಮವನ್ನು ಕೂಡ ಆಯೋಜಿಸಿರಲಿಲ್ಲ.
ಉಡುಪಿ ಭಾಗದ ವಿದ್ಯಾರ್ಥಿಗಳಿಗೆ ಆರಾಮದಾಯಕವಾದ ಕಲಿಕೆಯ ವಾತಾವರಣವನ್ನು ಒದಗಿಸಿಕೊಡುವಂತಹ ಒಂದು ಸಣ್ಣ ಪ್ರಯತ್ನವನ್ನು ವೆಂಟನಾ ಫೌಂಡೇಶನ್ ಆರಂಭಿಸಿದೆ. ಪ್ರತಿಯೊಂದು ಮಗುವು ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಅರ್ಹರಾಗಿದ್ದಾರೆ ಹಾಗೂ ಸರಿಯಾದ ಆಸನ ವ್ಯವಸ್ಥೆಗಳ ಕೊರತೆಯು ಅವರ ಶಿಕ್ಷಣಕ್ಕೆ ಅಡ್ಡಿ ಉಂಟುಮಾಡಬಾರದು ಎಂದು ಫೌಂಡೇಶನ್ ಭಾವಿಸುತ್ತದೆ. ಶಾಲೆಗಳಿಗೆ ಡೆಸ್ಕ್‌ಗಳನ್ನು ಒದಗಿಸುವ ಮೂಲಕ, ವಿದ್ಯಾರ್ಥಿಗಳ ಕಲಿಕೆ ಸುಗಮಗೊಳ್ಳುತ್ತದೆ ಹಾಗೂ ಅವರ ಜೀವನದಲ್ಲಿ ಸಕಾರಾತ್ಮಕ ಪ್ರಭಾವವನ್ನು ಉಂಟುಮಾಡುತ್ತದೆ ಎಂದು ಫೌಂಡೇಶನ್ ವಿಶ್ವಾಸ ಹೊಂದಿದೆ.
ಮಕ್ಕಳಿಗಾಗಿ ಶಿಕ್ಷಣವನ್ನು ಉತ್ತೇಜಿಸುವುದಕ್ಕಾಗಿ ಹಾಗೂ ಉತ್ತಮವಾದ ಭವಿಷ್ಯವನ್ನು ರೂಪಿಸುವುದಕ್ಕೋಸ್ಕರ ಶಾಲೆಗಳಿಗೆ ಡೆಸ್ಕ್‌ಗಳನ್ನು ದುರಸ್ತಿ ಮಾಡಿಕೊಡಲು ವೆಂಟನಾ ಫೌಂಡೇಶನ್ ಮುಂದೆ ಬಂದಿರುವುದು ಅವರ ಬದ್ಧತೆಗೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳ ಶಿಕ್ಷಣದ ಸುಧಾರಣೆಗಾಗಿ ಮೂಲಭೂತ ಆವಶ್ಯಕತೆಗಳನ್ನು ಒದಗಿಸಿಕೊಡುವಲ್ಲಿ ಫೌಂಡೇಶನ್‌ನ ಪ್ರಯತ್ನಗಳು ನಿಸ್ಸಂದೇಹವಾಗಿ ಹೆಚ್ಚು ಅನುಕೂಲಕರವಾದ ಕಲಿಕೆಯ ವಾತಾವರಣವನ್ನು ರೂಪಿಸುವಲ್ಲಿ ಸಹಾಯಮಾಡುತ್ತವೆ ಮತ್ತು ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವನ್ನು ಮಾಡಿಕೊಡುತ್ತವೆ .